Kannada NewsKarnataka NewsLatest

ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸರು

ಪ್ರಗತಿ ವಾಹಿನಿ, ಬೆಳಗಾವಿ  –
ಯಮಕನಮರಡಿಯಲ್ಲಿ ಸೆ.5 ರಂದು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
  ಯಮಕನ ಮರಡಿಯ ವಿನಾಯಕ ಹೊರಕೇರಿ ಎಂಬುವವರು ಸೆ. 5 ರಂದು ಸಂಜೆ ಬೈಕ್ ನಲ್ಲಿ ಬರುವಾಗ ಬೆನ್ನಟ್ಟಿ ಬಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಹಳೇ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿತ್ತು.
  ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಸಂತೋಷ ಗುರವ್, ಈರಣ್ಣ ಹಿಣ್ಣಕ್ಕನವರ್, ಆದಿತ್ಯ ಪ್ರಕಾಶ ಗಣಾಚಾರಿ, ಮಹಾಂತೇಶ ಈರಪ್ಪ ಕರಗುಪ್ಪಿ ಹಾಗೂ ಶನೂರ ಗಜರಾಸಾಬ್ ನದಾಫ್ ಬಂಧಿತ ಆರೋಪಿಗಳು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿನಾಯಕ ಸೋಮಶೇಖರ ಹೋರಕೇರಿ ( 28) ನವೀನ ದಾಬಾ ಬಳಿ  ದ್ವಿ ಚಕ್ರ ವಾಹನದ ಮೇಲೆ ಬರುವಾಗ ಬೆನ್ನತ್ತಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಯುವಕ ಶನಿವಾರವಷ್ಟೇ ಹುಟ್ಟು ಹಬ್ಬವನ್ನು  ಆಚರಣೆ ಮಾಡಿಕೊಂಡಿದ್ದ. ಮರುದಿನ ಈ ಘಟನೆ ನಡೆದಿತ್ತು.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – ಹುಟ್ಟುಹಬ್ಬದ ಮರುದಿನವೇ ಯುವಕನ ಕೊಲೆ

 

 

https://pragati.taskdun.com/crime-news/murder-bjp-youth-leader-latenight-mangaluru/

Home add -Advt

Related Articles

Back to top button