
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ತನ್ನ ಪತ್ನಿ ಮೇಲೆ ಕಣ್ಣು ಹಾಕಿದನೆಂಬ ಕಾರಣಕ್ಕೆ ಯುವಕನ ಕೊಲೆಗೈದ ಆರೋಪಿಯನ್ನು ಕೃತ್ಯ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುನೀಲ ಸಾಳುಂಕೆ ಕೊಲೆಯಾದವ. ಮಹೇಶ ತಳವಾರ ಬಂಧಿತ ಆರೋಪಿ.
ಇಂದು ಕರೋಶಿ ಗ್ರಾಮದಲ್ಲಿ ಸುನೀಲ ಸಾಳುಂಕೆ ಎಂಬ ಯುವಕನ ಶವ ಪತ್ತೆಯಾಗಿತ್ತು. ಚಿಕ್ಕೋಡಿ ಸಿಪಿಐ ಆರ್.ಆರ್. ಪಾಟೀಲ್ ಹಾಗೂ ಪಿಎಸ್ಆಯ ಯಮನಾಪ್ಪ ಮಾಂಗ ಇವರ ನೇತೃತ್ವದಲ್ಲಿ ತಕ್ಷಣ ತನಿಖೆ ಕೈಗೊಂಡು ಆರೋಪಿಗಾಗಿ ಜಾಲ ಬೀಸಿ, ಬಂಧಿಸಲಾಗಿದೆ.
“ನನ್ನ ಪತ್ನಿಮೇಲೆ ಕೆಟ್ಟ ಕಣ್ಣು ಇಟ್ಟಿದ್ದಕ್ಕೆ ನಾನೇ ಸುನೀಲನ ಕೊಲೆ ಮಾಡಿದ್ದೇನೆ” ಎಂದು ಆರೋಪಿ ಮಹಾಂತೇಶ ಒಪ್ಪಿಕೊಂಡಿದ್ದಾನೆ ಎಂದು ಚಿಕ್ಕೋಡಿ ಸಿಪಿಐ ಅರ್. ಆರ್. ಪಾಟೀಲ್ ತಿಳಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕರೋಶಿ ಯುವಕನ ಕೊಲೆ ಪ್ರಕರಣ ಭೇದಿಸಿದ ಚಿಕ್ಕೋಡಿ ಪೋಲಿಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.
ಭಗವಾ ಧ್ವಜದ ಸ್ಟೇಟಸ್ ; ಎಂಟು ಜನರ ವಿರುದ್ಧ ಪ್ರಕರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ