GIT add 2024-1
Laxmi Tai add
Beereshwara 33

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ, 18 ಸಾವಿರ ರೂ. ದಂಡ

ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಅಥಣಿ: ಕೊಲೆ ಪ್ರಕರಣವೊಂದರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ತಾಲೂಕಿನ ತೇವರಣ್ಣ ಗ್ರಾಮದ ಭೀಮಣ್ಣಾ ಭರಮು ಚಿಪ್ಪರಗಿ ಶಿಕ್ಷೆಗೆ ಗುರಿಯಾದವ. 2017ರ ಜು.19ರಂದು ನಡೆದಿದ್ದ ಅಪ್ಪಣ್ಣಾ ನೇಮನ್ಣಾ ಚಿಪ್ಪರಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಆರೋಪಿಯಾಗಿದ್ದ.

7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ  ಎಸ್.ಎಲ್.ಚವ್ಹಾಣ ಅವರು ಆರೋಪಿತನಿಗೆ ಶಿಕ್ಷೆ  ವಿಧಿಸಿ ತೀರ್ಪಿತ್ತಿದ್ದಾರೆ.  ಸರ್ಕಾರದ ಪರವಾಗಿ ಅಭಿಯೋಜಕ   ಜಿ. ತುಂಗಳ ಇವರು ವಾದ ಮಂಡಿಸಿದ್ದರು.  ಪ್ರಕರಣದ  ಅಥಣಿ ಸಿಪಿಐ ಆಗಿದ್ದ ಶೇಖರಪ್ಪಾ, ಎಚ್. ಆರ್. ಅವರು ಆರೋಪಿತನ ಮೇಲೆ ದೋಷಾರೋಪ ಪತ್ರ ಸಲ್ಲಿಸಿದ್ದರು.

ಆರೋಪಿ  ಭೀಮಣ್ಣಾ ಹಾಗೂ ಅಣ್ಣಪ್ಪಾ ಇಬ್ಬರೂ ಸಂಬಂಧಿಗಳು. ಇಬ್ಬರೂ ಮೊದಲು ಬೆಂಗಳೂರಿನ ಗ್ಯಾಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಫ್ಯಾಕ್ಟರಿ ಮುಚ್ಚಿದ್ದರಿಂದ ಅಣ್ಣಪ್ಪ ಗುಜರಾತ್ ರಾಜ್ಯದ ಸೂರತನಲ್ಲಿರುವ ಗ್ಲಾಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ.  ಆಗ ಆರೋಪಿ ಭೀಮಣ್ಣಾ ಈತನು ತನ್ನ ಹೆಂಡತಿ ಮಕ್ಕಳಿಗೆ ಕರೆದುಕೊಂಡು ತೆವರಟ್ಟಿ ಗ್ರಾಮಕ್ಕೆ ಬಂದು ಒಕ್ಕಲುತನ ಕೆಲಸ ಮಾಡಿಕೊಂಡಿದ್ದ.

ನಂತರದಲ್ಲಿ ಅಣ್ಣಪ್ಪಾ ಆರೋಪಿ ಭೀಮಣ್ಣಾ ನನ್ನು ಭೇಟಿಯಾಗಿ ಅವನಿಗೆ ಸೂರತ್ ಗೆ ಕರೆದುಕೊಂಡು ಹೋಗಿ ತಾನು ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸಿದ್ದ. ಅಪ್ಪಣ್ಣಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆತನ ತಲೆಗೆ ಫ್ಯಾನ್ ಬಡಿದು ಗಾಯಗೊಂಡಿದ್ದ. ಇದರ ಖರ್ಚನ್ನು ಆ ಫ್ಯಾಕ್ಟರಿಯವರೇ ಭರಿಸಿದ್ದರು.

ಆದರೆ ಆರೋಪಿ ಭೀಮಣ್ಣಾ ಈತನು ತನಗೆ ಆರಾಮಾದ ನಂತರ ಬೇರೆ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದಾಗ ಮೊದಲನೆಯ ಫ್ಯಾಕ್ಟರಿಯವರು ಆತನಿಗೆ ಮಾಡಿದ ಆಸ್ಪತ್ರೆಯ ಬಿಲ್ ಮರಳಿಸುವಂತೆ ಒತ್ತಡ ಹೇರತೊಡಗಿದರು. ಆರೋಪಿ ಭೀಮಣ್ಣನಿಗೆ ಸಂಬಳ ಸಾಲದೆ ಇದ್ದುದರಿಂದ ಪುನಃ ಊರಿಗೆ ಬಂದು ಕೃಷಿ ಆರಂಭಿಸಿದ್ದ.  ಗಾಯಗೊಂಡ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ತನಗೆ ಹೀಗಾಗಲು ಅಣ್ಣಪ್ಪನೇ ಕಾರಣವೆಂದು ದೂರುತ್ತಿದ್ದ.

Emergency Service

ಏತನ್ಮಧ್ಯೆ ಊರಿನ ಜನ ಅಣ್ಣಪ್ಪನನ್ನು ಕೊಂಡಾಡುತ್ತ ಆತ ಸೂರತ್ ನಲ್ಲಿ ಮನೆ ಖರೀದಿಸಿದ್ದಾನೆ. ನೀನು ಸಹ ಮಾಡಬಹುದಿತ್ತು ಎಂದು ಮೂದಲಿಸಿದಾಗ ಭೀಮಣ್ಣ ರೊಚ್ಚಿಗೆದ್ದಿದ್ದ. 2017ರ ಜು.19 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಣ್ಣಪ್ಪಾ  ತನ್ನ ಹೊಂಡಾ ಆ್ಯಕ್ಟಿವಾ ಸ್ಕೂಟಿಯ ಮೇಲೆ ಪತ್ನಿ ಲಕ್ಷ್ಮೀ ಅವರೊಂದಿಗೆ ತೇವರಣ್ಣ ಕಡೆಯಿಂದ ಮದಭಾವಿ ರಸ್ತೆಯಲ್ಲಿರುವತನ್ನ ಮನೆ ಕಡೆಗೆ ಹೊರಟಾಗ ಆರೋಪಿ ಭೀಮಣ್ಣ ಮಾರಕಾಸ್ತ್ರದಿಂದ ಅಣ್ಣಪ್ಪನ ತಲೆಗೆ ಹೊಡೆದು ಕೊಲೆ ಮಾಡಿದ್ದ.

*ವಿಐಎಸ್ಎಲ್ ಕಾರ್ಮಿಕರೊಂದಿಗೆ ಸಿಎಂ ಮಹತ್ವದ ಸಭೆ*

https://pragati.taskdun.com/visl-factoryshivamoggacm-basavaraj-bommaimeetiing/

ಫೆ. 24 ರಿಂದ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಸ

https://pragati.taskdun.com/opposition-leader-siddaramaiahs-visit-to-belgaum-from-feb-24/

*ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ತೊಟ್ಟು ಗಮನ ಸೆಳೆದ ಪ್ರಧಾನಿ ಮೋದಿ*

https://pragati.taskdun.com/narendra-modiwears-blue-sadri-jacketrecycled-plastic-bottles/

Bottom Add3
Bottom Ad 2