
‘ಆಪರೇಷನ್ ಮದತ್’ ಕರೆಗೆ ಸ್ಪಂದಿಸಿದ ಪೊಲೀಸರು
ರಾಜ್ಯ ಹೆದ್ದಾರಿಯಲ್ಲಿ ಚೆಲ್ಲಿದ್ದ ಮರಳು ತೆರವುಗೊಳಿಸಿ ಅಪಘಾತ ತಡೆಗೆ ಸಹಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ಹರಡಿ ಬಿದ್ದು ಅಪಘಾತಕ್ಕೆ ಕಾರಣವಾಗಲಿದ್ದ ಮರಳು ತೆರವುಗೊಳಿಸಲು ಮುಂದಾದ ‘ಆಪರೇಷನ್ ಮದತ್’ ತಂಡಕ್ಕೆಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸ್ಪಂದನೆ ಹಲವರ ಪ್ರಾಣ ರಕ್ಷಣೆಗೆ ನೆರವಾಗಿದೆ.
ಬುಧವಾರ ಬೆಳಿಗ್ಗೆ ಶಗುನ್ ಗಾರ್ಡನ್ ಹಾಲ್ ಬಳಿಯ ಖಾದರವಾಡಿ ಕ್ರಾಸ್ ನಲ್ಲಿ ಉದ್ಯಮ್ ಬಾಗ್ ರಸ್ತೆಯಲ್ಲಿ ಮರಳು ಸಾಗಿಸುತ್ತಿದ್ದ ಲಾರಿಯಿಂದ ವ್ಯಾಪಕ ಪ್ರಮಾಣದಲ್ಲಿ ಮರಳು ಚೆಲ್ಲಿಕೊಂಡಿತ್ತು. ವಾಹನ ಸಂಚಾರದೊಂದಿಗೆ ರಸ್ತೆಯುದ್ದಕ್ಕೂ ಹರಡಿಕೊಂಡಿತ್ತು. ಇದರಿಂದದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು ಬೀಳುವ ಅಪಾಯವಿತ್ತು.
ಈ ಪರಿಸ್ಥಿತಿ ಕಂಡ ‘ಆಪರೇಷನ್ ಮದತ’ ಗುಂಪಿನ ಸದಸ್ಯರೊಬ್ಬರು ಸ್ವಲ್ಪ ದೂರದಲ್ಲಿ ನಿಂತಿದ್ದ ಸಂಚಾರ ಪೊಲೀಸರಿಗೆ ಹಾಗೂ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಡಿಸಿಪಿ ಶೇಖರ್ ಟಿ. ಎಚ್. (Law & Order) ಅವರಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿದರು.
ಈ ಕರೆಗೆ ತಕ್ಷಣ ಸ್ಪಂದಿಸಿದ ಡಿಸಿಪಿ ಶೇಖರ್ ಟಿ. ಎಚ್. ಅವರು ಕೂಡಲೇ ಉದ್ಯಮ್ ಬಾಗ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಉದ್ಯಮ್ ಬಾಗ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉಸುಕು ತೆರವುಗೊಳಿಸುವ ‘ಆಪರೇಷನ್ ಮದತ್’ ತಂಡದೊಂದಿಗೆ ಕೈಜೋಡಿಸಿದರು.
ನಂತರದಲ್ಲಿ ಸಂಚಾರ ಸುಗಮವಾಗಿದ್ದು ರಸ್ತೆಗೆ ಚೆಲ್ಲಿದ್ದ ಉಸುಕಿನಿಂದ ಸಂಭವಿಸಬಹುದಾಗಿದ್ದ ಅಪಾಯಗಳು ತಪ್ಪಿವೆ.
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ, 18 ಸಾವಿರ ರೂ. ದಂಡ
*ವಿಐಎಸ್ಎಲ್ ಕಾರ್ಮಿಕರೊಂದಿಗೆ ಸಿಎಂ ಮಹತ್ವದ ಸಭೆ*
ಫೆ. 24 ರಿಂದ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಸ
ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ವಾಟ್ಸಪ್ ಗ್ರುಪ್ ಸೇರಲು 8197712235 ನಂಬರ್ ಗೆ ನ್ಯೂಸ್ ಎಂದು ಮೆಸೇಜ್ ಮಾಡಿ
ಪ್ರಗತಿವಾಹಿನಿ YouTube subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ