ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಮಕಮರಡಿಯಲ್ಲಿ ವಿವಾಹಿತೆಯ ಕೊಲೆಯಾಗಿದ್ದು, ಗಂಡ, ಅತ್ತೆ ಹಾಗೂ ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.
ಹಿಡಕಲ್ ಡ್ಯಾಂ ನಿವಾಸಿ ಶ್ರೀದೇವಿ ದೀಪಕ್ ಬೇವಿನಕಟ್ಟಿ (31 ವರ್ಷ) ಕೊಲೆಯಾದ ಮಹಿಳೆ. ಈಕೆಯ ವಿವಾಹವಾಗಿ 3 ವರ್ಷವಾಗಿತ್ತು. ವರದಕ್ಷಿಣೆ ಸಂಬಂಧ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
1.ದೀಪಕ್ ರಾಮಚಂದ್ರ ಬೇವಿನಕಟ್ಟಿ-34 ವರ್ಷ, ಮೃತೆಯ ಗಂಡ. ಹಿಡಕಲ್ ಡ್ಯಾಮ್.
2.ಪದ್ಮಾವತಿ ರಾಮಚಂದ್ರ ಬೇವಿನಕಟ್ಟಿ-50 ವರ್ಷ, ಮೃತೆಯ ಅತ್ತೆ.
3. ರಾಮಚಂದ್ರ ತಿಪ್ಪಣ್ಣ ಬೇವಿನಕಟ್ಟಿ-64 ವರ್ಷ, ಮೃತೆಯ ಮಾವ – ಬಂಧಿತರು.
ಮದುವೆಯಾಗಿ 3 ವರ್ಷವಾದರೂ ಮಕ್ಕಳಾಗಿಲ್ಲ ಎಂದು ಅತ್ತೆ ನಿತ್ಯವೂ ಹಿಂಸೆ ನೀಡುತ್ತಿದ್ದರು ಎಂದು ದೂರಲಾಗಿದೆ. ಜೊತೆಗೆ ತವರು ಮನೆಯಿಂದ ಹಣ ತರುವಂತೆ ಗಂಡ ಹಿಂಸಿಸುತ್ತಿದ್ದ ಎಂದೂ ಆರೋಪಿಸಲಾಗಿದೆ. ಹಾಗಾಗಿ 3 ಜನರು ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
https://pragati.taskdun.com/disputed-status-sp-sanjeev-patil-rushed-to-nippani-high-alert-declared-across-the-district/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ