Karnataka News

*ಶಾಸಕ ಬಿ.ಜಿ.ಗೋವಿಂದಪ್ಪ ಕಾರು ಚಾಲಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕಾಂಗ್ರೆಸ್ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಯಶವಂತ್ ಬಂಧಿತ ಕಾರು ಚಾಲಕ. ವಿವಾಹಿತ ಮಹಿಳೆ ಗಾಯಿತ್ರಿ ಎಂಬುವವರ ಜೊತೆ ಕಾರು ಚಾಲಕ ಯಶವಂತ್ ಅಕ್ರಮ ಸಂಬಂಧ ಹೊಂದಿದ್ದ. ಅಕ್ರಮ ಸಂಬಂಧಕ್ಕೆ ಗಾಯತ್ರಿ ಪತಿ ಪ್ರಸನ್ನ ಅಡ್ಡಿಯಾಗಿದ್ದಾನೆ ಎಂದು ಆತನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಯಶವಂತ್ ನನ್ನು ವಶಕ್ಕೆ ಪಡೆಯಲಾಗಿದೆ.

ಬೆನಕಲ್ ಗ್ರಾಮದ ಪ್ರಸನ್ನ ಮಾರ್ಚ್ 17ರಿಂದ ನಾಪತ್ತೆಯಾಗಿದ್ದ. ಜುಲೈ 21ರಂದು ಚಿಕ್ಕಮಗಳೂರಿನ ಲಿಂಗದಹಳ್ಳಿ ಬಳಿ ಪ್ರಸನ್ನ ಅವರ ಶವ ಪತ್ತೆಯಾಗಿತ್ತು. ಕೊಲೆಗೈದು ಲಿಂಗದಹಳ್ಳಿ ಬಳಿ ಶವ ಬಿಸಾಕಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಯಶ್ವವಂತ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Home add -Advt


Related Articles

Back to top button