*48 ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ ಖಾನಾಪುರ ಪೊಲೀಸರು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ಪಣಜಿ ಹೈವೆ ಕಾಮಗಾರಿ ಮಾಡುತ್ತಿರುವ ಯಶಸ್ವಿ ರೋಡ್ ವರ್ಕ್ಸ್ ಕಂಪನಿಯ ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು 48 ಗಂಟೆಗಳಲ್ಲಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಯಶಸ್ವಿ ರೋಡ್ ವರ್ಕ್ಸ್ ಕಂಪನಿ ಚಾಲಕ ಜಟ್ಟೆಪ್ಪಾ ಅಲಿಯಾಸ್ ರವಿ ಶರಣಪ್ಪಾ ಹಿರೇಕುರಬರ (35 ) ನನ್ನು ಮಾರ್ಚ್ 26 ರಂದು ರಾತ್ರಿ 09 ಗಂಟೆಯ ಸುಮಾರಿಗೆ ಖಾನಾಪೂರ ತಾಲೂಕಿನ ಮಾಡಿಗುಂಜಿ ಗ್ರಾಮ ಹದ್ದಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಜಯಕುಮಾರ ತಂದೆ ನಿಂಗಣ್ಣಾ (27) ತೇವರ ವಡಗೇರ, ಜಿ: ಯಾದಗಿರಿ ಮತ್ತು ಯಲ್ಲಪ್ಪಾ ತಂದೆ ಜಟ್ಟೆಪ್ಪಾ (35) ಗುಂಡಲಗೇರ, ತಾ: ಹುಣಸಗಿ, ಜಿ: ಯಾದಗಿರಿ ಎಂಬುವವರು ಹಲ್ಲೆಗೈದು ಕೊಲೆ ಮಾಡಿದ್ದರು.
ಮೃತನ ತಾಯಿ ನೀಡಿದ ದೂರು ಆದರಿಸಿ ಖಾನಾಪುರ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣ ಸಂಬಂಧ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳಗಾವಿ ಪೊಲೀಸ್ ಅಧೀಕ್ಷಕ ಡಾ: ಭೀಮಾಶಂಕರ ಗುಳೇದ ಆರೋಪಿಗಳ ಶೀಘ್ರ ಬಂಧನಕ್ಕಾಗಿ ಒಂದು ವಿಶೇಷ ತನಿಖಾ ತಂಡ ರಚಿಸಿದ್ದರು. ಈ ವಿಶೇಷ ತನಿಖಾ ತಂಡವು ಇಬ್ಬರು ಆರೋಪಿಗಳನ್ನು ಯಾದಗಿರಿ ಜಿಲ್ಲೆಯಲ್ಲಿ ಬಂಧಿಸಿದೆ.
ಈ ವಿಶೇಷ ತನಿಖಾ ತಂಡದ ಕಾರ್ಯಚರಣೆಯನ್ನು ಬೈಲಹೊಂಗಲ ಡಿ ಎಸ್ ಪಿ ರವಿ ಡಿ ನಾಯ್ಕ, ಖಾನಾಪುರ ಪೋಲೀಸ್ ಇನ್ಸಪೆಕ್ಟರ ಮಚಂದ್ರ ನಾಯಕ, ಗಿರೀಶ ಎಂ. ಪಿ.ಎಸ್.ಐ. ಎ.ಒ ನಿರಂಜನಸ್ವಾಮಿ, ಎ.ಎಸ್.ಐ ಸಿಬ್ಬಂದಿಗಳಾದ ಜಗದೀಶ ಕಾದ್ರೋಳ್ಳಿ. ಗುರುರಾಜ ತಮದಡ್ಡಿ. ಈಶ್ವರ ಜಿನ್ನವ್ವಗೋಳ, ಮಂಜುನಾಥ ಮುಸಳಿ, ಬೆಳಗಾವಿ ಜಿಲ್ಲಾ ಪೊಲೀಸ್ ಕಾರ್ಯಾಲಯದ ಟೆಕ್ನಿಕಲ್ ವಿಭಾಗದ ವಿನೋದ ಠಕ್ಕನ್ನವರ, ಸಚೀನ ಪಾಟೀಲ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ