
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಇಲ್ಲಿಗೆ ಸಮೀಪದ ಆನಿಗೋಳದಲ್ಲಿ ಕಲ್ಲಿನಿಂದ ಹೊಡೆದು ವ್ಯಕ್ತಿಯನ್ನು ಮರ್ಡರ್ ಮಾಡಲಾಗಿದೆ.

45 ವರ್ಷದ ಮಂಜುನಾಥ ಸುಣಗಾರ್ ಕೊಲೆಯಾದಾತ. 25 ಅಜಯ ಹಿರೇಮಠ ಕೊಲೆಗಾರ.
ಮಂಜುನಾಥ ಮತ್ತು ಅಜಯ ಕುಡಿದು ಜಗಳ ಮಾಡಿಕೊಂಡಿದ್ದರು. ಅದು ವಿಕೋಪಕ್ಕೆ ಹೋಗಿ ಅಜಯ ಕಲ್ಲಿನಿಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಮಂಜುನಾಥ ಸಾವಿಗೀಡಾಗಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.