
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಪಟ್ಟಣದ ಬೆಲ್ಲದ ಬಾಗೇವಾಡಿ ರಸ್ತೆಯ ಚಿಕ್ಕೋಡಿ ಉಪ ಕಾಲುವೆಯ ರಸ್ತೆಯ ಪಕ್ಕದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈಯ್ಯಲಾಗಿದೆ.
ಘಟನೆ ಮಂಗಳವಾರ ತಡ ರಾತ್ರಿಯಲ್ಲಿ ಜರುಗಿದೆ. ಮೃತ ವ್ಯಕ್ತಿಯು ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ ಗ್ರಾಮದ ಭೀಮಣ್ಣ ಕಲ್ಲಪ್ಪ.ಮುನ್ನೋಳ (51)ಎಂಬುದಾಗಿ ತಿಳಿದಿದೆ. ಮೃತನಿಗೆ ನಾಲ್ಕು ಅಣ್ಣ-ತಮ್ಮಂದರರಿದ್ದರು. ಅವರೆಲ್ಲರೂ ಈ ಮೊದಲೇ ನಿಧನರಾಗಿದ್ದಾರೆ. ಕೊಲೆಯಾದ ಭೀಮಪ್ಪಗೆ ಮದುವೆ ಆಗಿರಲಿಲ್ಲಾ ಮತ್ತು ಕುಡಿತದ ಚಟದಿಂದಾಗಿ ತನ್ನ ಜಮೀನನ್ನು ಬೇರೆಯರಿಗೆ ಕೊಟ್ಟಿದ್ದರು ಎಂದು ಅವರ ಅಣ್ಣನ ಮಗಳು ಹೇಳಿದ್ದಾರೆ
ಕೊಲೆಗೈದವರು ಯಾರು ಮತ್ತು ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಜಮಿನಿನ ವಿವಾದ ಇರಬಹುದು ಎಂದು ಶಂಕಿಸಲಾಗಿದೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಡಿಎಸ್ ಪಿ ಬಸವರಾಜ ಯಲಿಗಾರ್ ಹಾಗೂ ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ಬಸನಗೌಡ ನೇರ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಕ್ಕೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ