Uncategorized

*ಅವರ ರಾಜಕಾರಣ ಅವರು ಮಾಡಲಿ… ಎಂದು ತಿರುಗೇಟು ನೀಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ನೀಡಲಿ ಎಂದು ಹೇಳಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾದಿದ ಡಿ.ಕೆ.ಶಿವಕುಮಾರ್, ವರ್ಗಾವಣೆ ದಂಧೆ ಬಗ್ಗೆ ದಾಖಲೆಗಳಿವೆ ಎಂದು ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಅವರ ರಾಜಕಾರಣ ಅವರು ಮಾಡಲಿ, ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದರು.

Home add -Advt

ಅವರು ಯಾವ ಬಾಂಬ್ ಹಾಕ್ತಾರೆ ಹಾಕಲಿ, ಅವರ ಎಲ್ಲಾ ಆರೋಪಗಳಿಗೂ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಅವರು ಅವರದ್ದೇ ರೀತಿ ರಾಜಕಾರಣ ಮಾಡಲಿ ಎಂದು ಟಾಂಗ್ ನೀಡಿದರು.


Related Articles

Back to top button