Uncategorized

*ಪೆನ್ ಡ್ರೈವ್ ಬಾಂಬ್ ಸಿಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧಕ್ಕೆ ಪೆನ್ ಡ್ರೈವ್ ಹಿಡಿದು ಬಂದ ಮಾಜಿ ಸಿಎಂ ಕುಮಾರಸ್ವಾಮಿ, ವರ್ಗವಣೆ ದಂಧೆಯ ದಾಖಲೆಗಳು ಇದರಲ್ಲಿವೆ ಎಂದು ಹೇಳಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೇಬಲ್ಲಿದ್ದ ಪೆನ್ ಡ್ರೈವ್ ತೆಗೆದು ಮಾದ್ಯಮಗಳಿಗೆ ತೋರಿಸುತ್ತಾ ವರ್ಗಾವಣೆ ದಂಧೆ ಆಡಿಯೋ ಇದರಲ್ಲಿದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದರು.

Home add -Advt

ನನ್ನ ವಿರುದ್ಧ KST ಟ್ಯಾಕ್ಸ್ ಅಂತ ಆರೋಪ ಮಾಡಿದ್ದಾರೆ. ನಾನು ಕೆ ಎಸ್ ಟಿ ಟ್ಯಾಕ್ಸ್ ಅಂತ ಯಾವುದೂ ಇಟ್ಟುಕೊಂಡಿರಲಿಲ್ಲ. ತಾಜ್ ವೆಸ್ಟ್ ಎಂಡ್ ನಲ್ಲಿ ವಾಸ್ತವ್ಯ ಮಾಡಿದ್ದರ ಬಗ್ಗೆ ತಾಜ್ ವೆಸ್ಟ್ ಎಂದ್ ಬಿಲ್ ನ್ನು ಕಾಂಗ್ರೆಸ್ ನವರಿಗೇನಾದ್ರೂ ಕಳುಹಿಸಿದ್ರಾ? ನಾನೇನು ಬೀದಿಯಲ್ಲಿ ಹೋಗುವವನು ಅಂದುಕೊಂಡಿದ್ದಾರಾ? ಎಂದು ಕಿಡಿಕಾರಿದ್ದಾರೆ.

ನನಗೇನು 2-3 ಲಕ್ಷ ರೂಪಾಯಿ ಖರ್ಚು ಮಾಡುವ ಯೋಗ್ಯತೆ ಇಲ್ಲ ಅಂದುಕೊಂಡಿದ್ದಾರಾ? ನನ್ನ ಆಸ್ತಿ ಬಗ್ಗೆ ಬೇಕಾಅರೆ ಕಾಂಗ್ರೆಸ್ ನವರು ತನಿಖೆ ಮಾಡಲಿ ಎಂದು ಗುಡುಗಿದ್ದಾರೆ.


Related Articles

Back to top button