
ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷದ ಮುಂಚೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಅಮೇರಿಕಾದ ಮೇರಿಲ್ಯಾಂಡ್‌ನಲ್ಲಿರುವ ಮಾಜಿ ಗೆಳೆಯನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಕೊಲೆಯಾದ ಯುವತಿಯನ್ನು ಎಲ್ಲಿಕಾಟ್ ನಗರದ ನಿವಾಸಿ ನಿಕಿತಾ ಗೋಡಿಶಾಲ (27) ಎಂದು ಗುರುತಿಸಲಾಗಿದೆ. ಯುವತಿ ಮೃತದೇಹ ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ (26) ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ.
ಪೊಲೀಸರು ಮಾಜಿ ಗೆಳೆಯನ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧನ ವಾರಂಟ್ ಜಾರಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಶರ್ಮಾ ಜನವರಿ 2 ರಂದು ಪೊಲೀಸರಿಗೆ ದೂರು ನೀಡಿದ್ದಾನೆ. ಜನವರಿ 3 ರಂದು, ಪೊಲೀಸರು ಆತನ ಅಪಾರ್ಟೆಂಟ್ನಲ್ಲಿ ಸರ್ಚ್ ಮಾಡಿದ್ದಾಗ ಗೋಡಿಶಾಲಾಳ ಕೊಲೆ ಆಗಿರುವ ಸ್ಥಿಯಲ್ಲಿ ಶವ ಪತ್ತೆಯಾಗಿದೆ.
ಆರೋಪಿ ಅರ್ಜುನ್ ಶರ್ಮಾ ಭಾರತಕ್ಕೆ ಪರಾರಿಯಾಗಿದ್ದಾನೆ. ತನಿಖೆಯಲ್ಲಿ ಡಿಸೆಂಬರ್ 31 ರಂದು ಸಂಜೆ 7 ಗಂಟೆಯ ನಂತರ ಶರ್ಮಾ ಗೋಡಿಶಾಲಳನ್ನು ಕೊಂದಿದ್ದಾನೆ ಎಂದು ತಿಳಿದು ಬಂದಿದೆ.



