Kannada NewsKarnataka NewsLatest

*ಹೆಂಡತಿಯ ಕತ್ತು ಸೀಳಿ ಕೊಲೆಗೈದ ಗಂಡ; ಅನಾಥರಾದ ಪುಟ್ಟ ಮಕ್ಕಳು*

ಪ್ರಗತಿವಾಹಿನಿ ಸುದ್ದಿ; ಮುರುಡೇಶ್ವರ: ಗಂಡ-ಹೆಂಡತಿ ನಡುವಿನ ಜಗಳದಿಂದಾಗಿ ಇಬ್ಬರು ಮಕ್ಕಳು ಅನಾಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಸಬ್ಬತ್ತಿ ಕ್ರಾಸ್ ನಲ್ಲಿ ನಡೆದಿದೆ.

ಕೌಟುಂಬಿಕ ಜಗಳಕ್ಕೆ ಪತಿ ಮಹಾಶಯನೊಬ್ಬ ಪತ್ನಿಯನ್ನು ಕತ್ತು ಸೀಳಿ ಕೊಲೆಗೈದು ಪರಾರಿಯಾಗಿದ್ದಾನೆ. 30 ವರ್ಷದ ನಿಂದಿನಿ ಮೃತ ಮಹಿಳೆ. ಲೋಕೇಶ್ ನಾಯ್ಕ್ ಹಾಗೂ ನಂದಿನಿ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಆದರೆ ಪತಿ-ಪತ್ನಿ ನಡುವಿನ ಜಗಳ ವಿಪರೀತಕ್ಕೆ ತಿರುಗಿದ್ದು, ಪತಿ ಲೋಕೇಶ್, ಮಾರಕಾಸ್ತ್ರದಿಂದ ಪತ್ನಿಯ ಕತ್ತನ್ನೇ ಇರಿದು ಕೊಂದಿದ್ದಾನೆ.

ಪತಿಯಿಂದ ಮಾರಣಾಂತಿಕ ಹಲ್ಲೆಗೊಳಗಾದ ನಂದಿನಿ, ಕೂಗಾಡುತ್ತಾ ಮನೆಯಿಂದ ಹೊರಗೋಡಿಬಂದಿದ್ದು, ಅಂಗಳದಲ್ಲಿಯೇ ಕುಸಿದು ಬಿದ್ದು ರಕ್ತದ ಮಡುವಿನಲ್ಲಿ ನರಳಾಡುತ್ತಾ ಪ್ರಾಣಬಿಟ್ಟಿದ್ದಾರೆ. ಕೃತ್ಯದ ಬಳಿಕ ಪತಿ ಲೋಕೇಶ್ ಪರಾರಿಯಾಗಿದ್ದಾನೆ.

ಘಟನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾಸ್ಥಳಕ್ಕೆ ಆಗಮಿಸಿದ ಮುರುಡೇಶ್ವರ ಠಾಣೆ ಪೊಲೀಸರು ಪರುಶೀಲನೆ ನಡೆಸಿದ್ದು, ಹೋಟೆಲ್ ಒಂದರಲ್ಲಿ ಅಡಗಿದ್ದ ಪತಿ ಲೋಕೇಶ್ ನನ್ನು ಬಂಧಿಸಿದ್ದಾರೆ.

Home add -Advt

ಪತಿ ಹಾಗೂ ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಇಬ್ಬರು ಮಕ್ಕಳು ಅನಾಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

ಕೌಟುಂಬಿಕ ಜಗಳಕ್ಕೆ ಹೆಂಡತಿಯನ್ನೇ ಕೊಲೆಗೈದ ಪತಿ ಮಹಾಶಯ ಜೈಲು ಪಾಲಾಗಿದ್ದಾನೆ. ಇತ್ತ ಅಮ್ಮನನ್ನು ಕಳೆದುಕೊಂಡು ಅಪ್ಪನೂ ಇಲ್ಲದೇ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button