Kannada NewsLatest

*ಸರ್ವರಿಗೂ ಶುದ್ಧ ಕುಡಿಯುವ ನೀರು ಬೀಳಗಿಯಲ್ಲಿ ಸಾಕಾರವಾಗಿದೆ: ಮುರುಗೇಶ ನಿರಾಣಿ*

ಸುಳ್ಳು ಗ್ಯಾರಂಟಿಗಳು, ಹಿಂದುಗಳ ಶಕ್ತಿ ದಮನಿಸುವುದು ಕಾಂಗ್ರೆಸ್ ಪ್ರಣಾಳಿಕೆ

ಪ್ರಗತಿವಾಹಿನಿ ಸುದ್ದಿ; ಬೀಳಗಿ: ಪ್ರಧಾನಮಂತ್ರಿ ನರೇಂದ್ರ ಮೊದಿಯವರ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರನ್ನು ಮನೆ ಬಾಗಿಲಿಗೆ ತಲುಪಿಸಿದ ತೃಪ್ತಿ ನನಗಿದೆ ಎಂದು ಮುರುಗೇಶ ನಿರಾಣಿ ಹೇಳಿದರು.

ಕಂದಗಲ್ ಹಾಗೂ ಹೊನ್ನಿಹಾಳ ಎಲ್. ಟಿ.ಯಲ್ಲಿ ನಡೆದ ರೋಡ್ ಶೋ ಹಾಗೂ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ೨೦೦೮-೧೩ರಲ್ಲಿಯೇ ೫ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದೆ. ಮೊದಲನೆಯ ಹಂತದಲ್ಲಿ ನದಿಯಿಂದ ನೀರನ್ನು ತಂದು ಗ್ರಾಮಗಳಿಗೆ ತಲುಪಿಸಿದ್ದೇವು. ಈಗ ಎರಡನೆಯ ಹಂತದಲ್ಲಿ ಜಲ-ಜೀವನ್ ಮಿಷನ್ ಯೋಜನೆಯಡಿ ಮತಕ್ಷೇತ್ರದ ಎಲ್ಲ ಗ್ರಾಮಗಳ ಪ್ರತಿ ಮನೆಯ ಬಾಗಿಲವರೆಗೂ ಪೈಪ್ ಲೈನ್ ಅಳವಡಿಸಿ ನೀರು ಪೂರೈಸುವ ಎರಡನೆಯ ಹಂತದ ಯೋಜನೆಯನ್ನೂ ಜಾರಿಗೊಳಿಸಿದ್ದೇವೆ. ಇದು ಇಷ್ಟಕ್ಕೇ ನಿಲ್ಲಲಾರದು. ಮೂರನೇ ಹಂತದಲ್ಲಿ ಮತಕ್ಷೇತ್ರದ ಪ್ರತಿ ಮನೆಯ ಅಡುಗೆ ಮನೆಗೆ ಶುದ್ಧ ನೀರನ್ನು ೨೪*೭ ತಲುಪಿಸುವ ಗುರಿ ನನ್ನದಾಗಿದೆ. ಎಂದು ಅವರು ಹೇಳಿದರು.

ಜೆಜೆಎಂ ಅಡಿಯಲ್ಲಿ ಇಲ್ಲಿಯವರೆಗೆ ೧೦೧ ಜನವಸತಿ ಸ್ಥಳಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ೫ ವರ್ಷಗಳಲ್ಲಿ ಮೇಲ್ಮಟ್ಟದ ಜಲಸಂಗ್ರಹಾಲಯ ನಿರ್ಮಾಣ, ಜಲಶುದ್ಧೀಕರಣ ಘಟಕಗಳ ನಿರ್ಮಾಣ, ಪೈಪ್‌ಲೈನ್ ಜೋಡಣೆ, ಶಾಲೆ-ಕಾಲೇಜು, ಅಂಗನವಾಡಿ ಇತ್ಯಾದಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಹಾಗೂ ನಿರ್ವಹಣೆಗಾಗಿ ಸೇರಿ ಒಟ್ಟು ೧೬೨.೪೪ ಕೋಟಿ ಅನುದಾನವನ್ನು ವಿನಿಯೋಗಿಸಲಾಗಿದೆ ಎಂದು ಅವರು ಹೇಳಿದರು.

ಬಸ್ ಕಂಡಿಶನ್ ಹಾಗೂ ಚಾಲಕ ಚೆನ್ನಾಗಿದ್ದರೆ ಮಾತ್ರ ಜನ ಹತ್ತುತ್ತಾರೆ. ಹೀಗಾಗಿ ಬೀಳಗಿ ಕಾಂಗ್ರೆಸ್ ಬಸ್‌ಗೆ ಹೊಸದಾಗಿ ಜನ ಹತ್ತುವುದಿರಲಿ, ಹಳಬರು ಬಸ್ ಬಿಟ್ಟು ಕೆಳಗೆ ಇಳಿಯುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೇಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಹಾಗೂ ಬೀಳಗಿ ಕಾಂಗ್ರೆಸ್ ಬಸ್ ಚಾಲಕ ಜೆ.ಟಿ. ಪಾಟೀಲ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು ಈ ಬಾರಿ ಬೀಳಗಿಯಲ್ಲಿ ಕಾಂಗ್ರೆಸ್‌ನಿAದ ಕಾರ್ಯಕರ್ತರು ಬಿಜೆಪಿ ಕಡೆ ಮುಖ ಮಾಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಯಾರೇ ಪಕ್ಷದ ಸಿದ್ಧಾಂತ ಒಪ್ಪಿ, ಅಭಿವೃದ್ದಿ ಚಿಂತನೆಗೆ ಮಹತ್ವ ಕೊಟ್ಟು ಬಿಜೆಪಿಗೆ ತುಂಬು ಮನಸ್ಸಿನಿಂದ ಬಂದರೂ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.

ಭಜರಂಗದಳ ನಿಷೇಧ, ಅಲ್ಪಸಂಖ್ಯಾತರ ಒಲೈಕೆ, ಮೋದಿಜಿ ಕುರಿತು ಅಸೂಹೆ ಪಡುವುದು, ಲಿಂಗಾಯತರನ್ನು ಭ್ರಷ್ಟರು ಎನ್ನುವುದು, ಜಾತಿ-ಜಾತಿಗಳ ಮಧ್ಯ ಜಗಳ ಹಚ್ಚುವುದು ಇವು ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೂ ಇದನ್ನೆ ಮಾಡುತ್ತಾರೆ. ಹೀಗಾಗಿ ಕರ್ನಾಟಕದ ಜನ ಪ್ರಜ್ಞಾವಂತರು ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ರಚನೆಗೆ ಆಶಿರ್ವಾದ ಮಾಡುತ್ತಾರೆ ಎಂದು ಮುರುಗೇಶ ನಿರಾಣಿ ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅಂಗಡಿ, ರಾಮಣ್ಣ ಕಾಳಪ್ಪಗೋಳ, ಬಮ್ಮಯ್ಯ ಹಿರೇಮಠ, ಸಿದ್ದಪ್ಪ ಮಳೆನ್ನವರ, ಮಳಿಯಪ್ಪ ಮಳೆಯನ್ನವರ, ರಾಮನಗೌಡ ಪಾಟೀಲ, ದ್ರಾಕ್ಷಾಯಣಿ ಜಂಬಗಿ, ಸುಶೀಲಾಬಾಯಿ ಲಮಾಣಿ ಹಲವರು ಉಪಸ್ಥಿತರಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ:
ಯಂಡಿಗೇರಿ ಗ್ರಾಮದ ಎಸ್.ಸಿ. ಸಮುದಾಯದ ಪ್ರಮುಖ ಮುಖಂಡರಾದ ಹಣಮಂತ ಮಾದರ, ಫಕೀರಪ್ಪ ಮಾದರ, ಮುತ್ತೆಪ್ಪ ಮಾದರ, ಬಸವರಾಜ ಮಾದರ, ತಿಪ್ಪಣ್ಣ ಮಾದರ, ಯಲ್ಲಪ್ಪ ಮಾದರ, ಲಕ್ಕವ್ವ ಮಾದರ ಹಾಗೂ ಜಕನವ್ವ ಮಾದರ ಸೇರಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯಕ್ರಮಗಳನ್ನು ಮೆಚ್ಚಿ ಲಕ್ಷö್ಮಣ ನಿರಾಣಿ, ಕಲ್ಮೇಶ ಗೊಸಾರ, ಹೂವಪ್ಪ ರಾಠೋಡ್, ಸತೀಶ ಮಾದರ ಹಾಗೂ ಮಹೇಶ ಮಾದರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.

ಪ್ರಧಾನಿ ಮೋದಿ ಕಾರ್ಯಕ್ರಮದ ದಿನಾಂಕ ಬದಲಾವಣೆ

ಭಾರತೀಯ ಜನತಾ ಪಾರ್ಟಿ ಚುನಾವಣಾ ಪ್ರಚಾರದ ಅಂಗವಾಗಿ ಬಾದಾಮಿಯಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಜಿಯವರ ಬೃಹತ್ ಬಹಿರಂಗ ಪ್ರಚಾರ ಸಭೆಯ ದಿನಾಂಕ ಬದಲಾವಣೆಯಾಗಿದ್ದು, ಈ ಮೊದಲು ನಿಗದಿಯಾಗಿದ್ದ ದಿ.೦೭.೦೫.೨೦೨೩ ರ ಬದಲಾಗಿ ಒಂದು ದಿನ ಮುಂಚಿತವಾಗಿ ಶನಿವಾರ, ದಿ. ೦೬.೦೫.೨೦೨೩ ರಂದು ಸಾಯಂಕಾಲ ೪.೦೦ ಗಂಟೆಗೆ ಬಾದಾಮಿ-ಬನಶಂಕರಿ ರಸ್ತೆಯಲ್ಲಿರುವ ಬನಶಂಕರಿ ಲೇಔಟ್ ನಲ್ಲಿ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮಹಾಜನತೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ವಿನಂತಿಸಿಕೊಂಡಿದ್ದಾರೆ.

https://pragati.taskdun.com/nitin-gadkaricampaignnippanishashikala-jolle/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button