
ಪ್ರಗತಿವಾಹಿನಿ ಸುದ್ದಿ; ಹಾವೇರಿ: ಯಾವುದೂ ಶಾಶ್ವತವಲ್ಲ, ಸ್ಥಾನಮಾನ, ಅಧಿಕಾರ ಯಾವುದೂ ಶಾಶ್ವತವಲ್ಲ ಎಂದು ಭಾವುಕ ಮಾತನಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ಬೆನ್ನಲ್ಲೇ ಇದೀಗ ಸಚಿವ ಮುರುಗೇಶ್ ನಿರಾಣಿ ಸಿಎಂ ಬೊಮ್ಮಾಯಿ ಅಣ್ಣ ಕೇಂದ್ರ ಸಚಿವರಾಗಲಿದ್ದಾರೆ ಎಂದಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಸಚಿವ ನಿರಾಣಿ, ಮುಂದೆ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ. ಈ ಅವಧಿ ಪೂರ್ತಿ ಸಿಎಂ ಆಗಿ ಬೊಮ್ಮಾಯಿ ಮುಂದುವರೆಯಲಿದ್ದು, ಬಳಿಕ ಅವರ ತಂದೆಯಂತೆಯೇ ಕೇಂದ್ರ ಸಚಿವರು ಕೂಡ ಆಗಲಿದ್ದಾರೆ. ಆ ವಿಸ್ವಾಸ ನಮಗಿದೆ ಎಂದರು.
ಇದೇ ವೇಳೆ ಮುರುಗೇಶ್ ನಿರಾಣಿ ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಈ ಹಿಂದೆ ಸಚಿವ ಈಶ್ವರಪ್ಪನವರ ನೀಡಿದ್ದ ಹೇಳಿಕೆಗೆ ಯಾರ್ಯಾರೋ ಏನೇನೋ ಮಾತನಾಡುತ್ತಾರೆ. ಆದರೆ ಅದಕ್ಕೆಲ್ಲ ಕಿವಿಗೊಡಬಾರದು. ಸಿಎಂ ಬೊಮ್ಮಾಯಿ ಅವಧಿ ಪೂರ್ಣಗೊಳಿಸಲಿದ್ದಾರೆ. ಮುಂದೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಬದುಕು, ಸ್ಥಾನಮಾನ, ಅಧಿಕಾರ ಯಾವುದೂ ಶಾಶ್ವತವಲ್ಲ; ಸಿಎಂ ಬೊಮ್ಮಾಯಿ ಭಾವುಕರಾಗಿದ್ದೇಕೆ?