Latest

*ನಾನು ಮಾಡಿದ ಅಭಿವೃದ್ದಿಯ ರಿಪೊರ್ಟ್‌ಕಾರ್ಡ್ ಜನರ ಬಳಿ ಇದೆ: ಮುರುಗೇಶ ನಿರಾಣಿ*


ಪ್ರಗತಿವಾಹಿನಿ ಸುದ್ದಿ; ಕುಂದರಗಿ: ನಾನು ಮಾಡಿದ ಅಭಿವೃದ್ದಿ ಕಾರ್ಯಗಳ ರಿಪೊರ್ಟ್ ಕಾರ್ಡ್ ನ್ನು ಜನತೆಯ ಮುಂದಿಟ್ಟಿದ್ದೇನೆ. ಅವರ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸಿದ್ದರಿಂದ ದಾಖಲೆಯ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

ಕುಂದರಗಿಯಲ್ಲಿ ನಡೆದ ಅಂಬೆಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡುವ ಜೊತೆಗೆ ದೇಶವಾಸಿಗಳು ಸಮಾನತೆಯಿಂದ ಬದುಕುವ ಮಾರ್ಗವನ್ನು ಹೇಳಿಕೊಟ್ಟರು. ತಮಗಾದ ಸಂಕಟವು ಮುಂದಿನ ಜನಾಂಗಕ್ಕೆ ಬಾಧಿಸದೇ ದೇಶ ಸೌಹಾರ್ದತೆಯಿಂದ ಬದುಕಬೇಕೆನ್ನುವ ಉತ್ಕಟ ಬಯಕೆಯಿಂದ ಬದುಕುವ ಹೊಸ ಮಾರ್ಗವನ್ನು ಬೋಧಿಸಿದರು ಎಂದರು.

ಕಳೆದ 5 ವರ್ಷಗಳ ಅವಧಿಯಲ್ಲಿ ಸರ್ಕಾರದ ಜನ ಕಲ್ಯಾಣದ ಯೋಜನೆಗಳನ್ನು ಯಾವುದೇ ಬೇಧ-ಭಾವ ಮಾಡದೇ ಅರ್ಹ ಫಲಾನುಭವಿಗಳಿಗೆ ಮುಟ್ಟಿಸಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ದರ್ಜೆಯ ಸೌಕರ್ಯದ ಜೊತೆಗೆ ಸರ್ಕಾರದ ಯೋಜನೆಗಳ ಫಲ ದೊರಕಿದೆ. ದೇಶ ಬಿಜೆಪಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ತರುವ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಮೊದಿಜಿ ಸರ್ಕಾರ ಯಶಸ್ವಿಯಾಗಿದೆ. ಇದರಿಂದಾಗಿ ದೇಶವಾಸಿಗಳಿಗೆ ನೆಮ್ಮದಿಯ ಬದುಕು ದೊರೆಯುವ ಜೊತೆಗೆ ಭಾರತ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹೊಳಬಸು ಬಾಳಶೆಟ್ಟಿ, ಮಲ್ಲಿಕಾರ್ಜುನ ಅಂಗಡಿ, ಕಲ್ಮೇಶ ಗೋಸಾರ, ವೀರಣ್ಣ ತೋಟದ, ಈರಣ್ಣ ಗಿಡ್ಡಪ್ಪಗೋಳ ಉಪಸ್ಥಿತರಿದ್ದರು.

Home add -Advt
https://pragati.taskdun.com/belagaviwater-supplyproblem/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button