
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗಳು ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಮಠದ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ನಿಟ್ಟಿನಲ್ಲಿ ಪ್ರಭಾರ ಉಸ್ತುವಾರಿಯಾಗಿ ಬಸವಪ್ರಭುಶ್ರೀ ಅವರನ್ನು ನೇಮಕ ಮಾಡಲಾಗಿದೆ. ಬಸವಪ್ರಭುಶ್ರೀ ದಾವಣಗೆರೆ ವಿರಕ್ತ ಮಠದ ಸ್ವಾಮೀಜಿ. ಮುರುಘಾಮಠದ ಪೂಜಾ ಕೈಂಕರ್ಯ, ಧಾರ್ಮಿಕ,ಸೇವಾಕಾರ್ಯಗಳ ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬಸವಪ್ರಭುಶ್ರೀ ಮಠದ ಗದ್ದುಗೆ ದರ್ಶನ ಪಡೆದು ಪೂಜೆಯನ್ನು ನೆರವೇರಿಸಿದರು.
ದಿನನಿತ್ಯದ ಮಠದ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವಪ್ರಭುಶ್ರೀ, ಮಠದ ಪೂಜೆ, ದಾಸೋಹ, ಮಠದ ಕೆಲಸಗಳನ್ನು ನೋಡಿಕೊಳ್ಳಲು ಶಿವಮೂರ್ತಿ ಮುರುಘಾ ಶರಣರಿಂದ ಆದೇಶ ಸಿಕ್ಕಿದೆ. ನಿಷ್ಠೆ ಹಾಗೂ ಭಕ್ತಿಯಿಂದ ಮುರುಗೇಶ, ಬಸವೇಶನ ಸೇವಾಕಾರ್ಯವನ್ನು ಮಾಡುತ್ತೇನೆ. ಭಕ್ತರು ಎಂದಿನಂತೆ ಸಹಕರಿಸಬೇಕು ಎಂದರು.
ಇದು ತಾತ್ಕಾಲಿಕ ಆದೇಶವಾಗಿದ್ದು, ಮುಂದಿನ ಆದೇಶದವರೆಗೂ ಮಠದ ಪೂಜಾ ಕೈಂಕರ್ಯ, ದಾಸೋಹ, ಸೇವಾಕಾರ್ಯಗಳ ಜವಾಬ್ದಾರಿ ನಿರ್ವಹಿಸುತ್ತೇನೆ. ಮಠದ ಮುಖಂಡರು, ಭಕ್ತರು ಎಲ್ಲರೂ ಸಹಕರಿಸುವಂತೆ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮ ಘಟ್ಟಕ್ಕೆ – ಡಿ.ಕೆ.ಶಿವಕುಮಾರ್ ಬಹಿರಂಗ
https://pragati.taskdun.com/latest/d-k-shivakumarbharath-jodo-yatrebellarypressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ