
ಚಿತ್ರದುರ್ಗ: ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ತೀವ್ರ ಎದೆನೋವಿನಿಂದ ಕಾರಾಗೃಹದಲ್ಲಿಯೇ ಕುಸಿದು ಬಿದ್ದಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಮುರುಘಾಶ್ರೀಗಳಿಗೆ ಮೂವರು ವೈದ್ಯರ ತಂದದಿಂದ ತಪಾಸಣೆ ನಡೆಸಲಾಗಿದ್ದು, ಇಸಿಜಿ ಕೂಡ ಮಾಡಲಾಗಿದೆ. ಈ ವೇಳೆ ಮುರುಘಾಶ್ರೀಗಳಿಗೆ ಹೃದಯ ಸಂಬಂಧಿ ಸಮಸ್ಯೆಯಿದೆ. ಬೆನ್ನು ನೋವಿನಿಂದಲೂ ಅವರು ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ ಮುರುಘಾಶ್ರೀಗಳಿಗೆ ಬಿಪಿ, ಶುಗರ್ ಇದ್ದು, ಹೃದಯ ಸಂಬಂಧಿ ಸಮಸ್ಯೆಯೂ ಇರುವುದರಿಂದ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುವುದು ಎಂದು ಜಿಲ್ಲಾಸ್ಪತ್ರೆ ವೈದ್ಯ ಡಾ.ಬಸವರಾಜ್ ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮುರುಘಾ ಶ್ರೀಗಳನ್ನು ಶಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಎದೆನೋವಿನಿಂದ ಕಾರಾಗೃಹದಲ್ಲಿ ಕುಸಿದುಬಿದ್ದ ಮುರುಘಾಶ್ರೀ