Kannada NewsLatest

ಮುರುಗೋಡ ಶ್ರೀಗಳಿಗೆ ವಿಶ್ವಚೇತನ ಪ್ರಶಸ್ತಿ

ಮುರುಗೋಡ ಶ್ರೀಗಳಿಗೆ ವಿಶ್ವಚೇತನ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ :  ಮುರುಗೋಡದ ಮಹಾಂತ ದುರುದುಂಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿಗೆ ವಿಶ್ವಚೇತನ ಪ್ರಶಸ್ತಿ ಲಭಿಸಿದೆ. ಇದೇ ಜು.20 ರಂದು ಬೆಂಗಳೂರಿನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಬೆಳಗ್ಗೆ 10ಕ್ಕೆ ಶ್ರಿಶ್ರೀಗಳಿಗೆ ಪ್ರಶಸ್ತಿ ಪ್ರಧಾನ ಜರುಗಲಿದೆ.

ಪ್ರಶಸ್ತಿ ಪ್ರಧಾನವನ್ನು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿ.ಗಿರೀಶ ಚಂದ್ರ ಅವರು ಮಾಡಲಿದ್ದಾರೆ. ಈ ಕಾರ್ಯಕ್ರಮದ ಸಾನಿದ್ಯವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಕರ್ನಾಟಕ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾದ ಬಿ. ಎಸ್. ಪರಮಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಕೃತ ಪಂಡಿತರಾದ ಬೆಂಗಳೂರಿನ ಚನ್ನಬಸವರಾಧ್ಯರು, ನಿರಂಜನಾದ್ಯರು, ಡಾ. ಶಿವಯೋಗಿ ಸ್ವಾಮಿ ಮಳಿಮಠ ಅವರು ಭಾಗಿಯಾಗಲಿದ್ದಾರೆ.

ಈ  ಕಾರ್ಯಕ್ರಮದಲ್ಲಿ ನಾಡಿನ ಹೊರ ನಾಡಿನ ಜನರು ಭಾಗಿಯಾಗಲಿದ್ದು, ಈ ಕಾರ್ಯಕ್ರಮ ವೈದೀಕ ಚಾರಿಟಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ, ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಶ್ರೀಗಳನ್ನು ಮುರುಗೋಡ ಮಠಕ್ಕೆ ಭೇಟಿ ನೀಡಿ ವೇದ ಮೂರ್ತಿ ವೀರಭದ್ರ ದೇವಸ್ಥಾನ ಬೆಳಗಾವಿಯ ಸಂಗಯ್ಯ ಸ್ವಾಮಿ, ಕೆಎಲ್‌ಇ ಶಿವಾಲಯದ ಶಂಕರಯ್ಯ ಸ್ವಾಮಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ಯಾಂಕಿನ ಉಪಾಧ್ಯಕ್ಷ ಭೀರಪ್ಪ ಗಡ್ಡದವರ ಶ್ರೀಗಳಿಗೆ ಗೌರವಿಸಿದರು. ////

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button