ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಧರ್ಮ ಸಂಘರ್ಷ ಆರಂಭವಾಗಿದೆ. ಹಿಜಾಬ್ ವಿರುದ್ಧ ಅಭಿಯಾನ, ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ವಿರುದ್ಧ ಜಟ್ಕಾ ಕಟ್ ಕ್ಯಾಂಪೇನ್, ಆಜಾನ್ ವಿರುದ್ಧ ಅಭಿಯಾನ ಬೆನ್ನಲ್ಲೇ ಇದೀಗ ಮುಸ್ಲಿಂ ವಾಹನ ನಿಷೇಧ ಅಭಿಯಾನ ಆರಂಭವಾಗಿದೆ.
ಹಿಂದೂ ಪರ ಸಂಘಟನೆಗಳು ಹೊಸ ಅಭಿಯಾನ ಆರಂಭಿಸಿದ್ದು, ದೇವಾಲಯ, ತೀರ್ಥ ಕ್ಷೇತ್ರಗಳಿಗೆ ಮುಸ್ಲಿಂ ವಾಹನ ಬಳಸದಂತೆ ಕರೆ ನೀಡಲಾಗಿದೆ. ಇದೀಗ ಬೇಸಿಗೆ ರಜೆ ಆರಂಭವಾಗಿರುವ ಹೊತ್ತಲ್ಲೇ ಇಂಥದ್ದೊಂದು ಹೊಸ ಅಭಿಯಾನ ಮುಸ್ಲಿಂ ಟ್ರಾವಲ್ಸ್ ಗಳಿಗೆ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.
ಭಾರತ ರಕ್ಷಾ ವೇದಿಕೆಯ ಪ್ರಶಾಂತ್ ಬಂಗೇರಾ ಈ ಅಭಿಯಾನ ಆರಂಭಿಸಿದ್ದು, ದೇವಾಲಯ, ಪ್ರವಾಸಿ ತಾಣಗಳಿಗೆ ಮುಸ್ಲಿಂ ವಾಹನ ಬದಲಾಗಿ ಹಿಂದೂ ವಾಹನ ಬಳಸಿ ಎಂದು ಕರೆ ಕೊಟ್ಟಿದ್ದಾರೆ.
ಗೋಮಾಂಸ ತಿನ್ನುವವರ ಜತೆ ಧರ್ಮ ಕ್ಷೇತ್ರಕ್ಕೆ ಹೋಗಬೇಡಿ. ಹಿಂದು ಧರ್ಮದ ವಾಹನ ಚಾಲಕರು ಈಗಾಗಲೇ ಬೀದಿಗೆ ಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗಿ ಹಿಂದೂ ವಾಹನ ಚಾಲಕರಿರುವ ವಾಹನಗಳನ್ನೇ ಬಳಸಬೇಕು ಎಂದು ತಿಳಿಸಿದ್ದಾರೆ.
ಇನ್ನು ದೇವಾಲಯಗಳಿಗೆ ಮುಸ್ಲಿಂ ವಾಹನ ನಿಷೇಧ ಕುರಿತು ಬೆಳಗಾವಿಯಲ್ಲಿ ಬೆಂಬಲ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇದೊಂದು ಹೊಸ ಅಭಿಯಾನ ಅನ್ನುವುದಕ್ಕಿಂತ ಸ್ವತ: ಹಿಂದೂಗಳು ಜಾಗೃತರಾಗಬೇಕು. ಈ ಅಭಿಯಾನಕ್ಕೆ ನಮ್ಮ ಬೆಂಬಲವಿದೆ. ವಕ್ಫ್ ಬೋರ್ಡ್ ನು ಕೂಡ ಬ್ಯಾನ್ ಮಾಡಬೇಕು ಎಂದಿದ್ದಾರೆ.
2 ವರ್ಷದ ಬಳಿಕ ಅಮರನಾಥ ಯಾತ್ರೆಗೆ ಅವಕಾಶ: ಏ.11ರಿಂದ ನೋಂದಣಿ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ