ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವರಿಗೆ ವಿಶೇಷ ಆರೋಗ್ಯ ಸೇವೆಯಡಿ ಮಜರಾಯಿ ಹಾಗೂ ಹಜ್ ಮತ್ತು ವಕ್ಪ್ ಇಲಾಖೆಯಡಿ 1 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದ ಹೊಸಪೇಠಗಲ್ಲಿ ಬಳಿ ಇರುವ ಮುಸ್ಲಿಮ ಸಮಾಜದ (ಖಬರ ಸ್ಥಾನ) ಸ್ಮಶಾನ ಭೂಮಿ ಕಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಮುಸ್ಲಿಂ ಸಮಾಜ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಮುಜರಾಯಿ ಹಾಗೂ ವಕ್ಫ್ ಇಲಾಖೆ ವತಿಯಿಂದ 10 ಲಕ್ಷ ರೂಗಳ ಅನುದಾನ ಸ್ಮಶಾನ ಭೂಮಿ ಕಪೌಂಡ ನಿರ್ಮಾಣ ಕಾಮಗಾರಿಗೆ ಮಂಜೂರಾಗಿದೆ ಎಂದರು. ಮುಸ್ಲಿಂ ಬಾಂಧವರಿಗೆ ಕೇಂದ್ರ-ರಾಜ್ಯ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಮಂದಿರಗಳಂತೆ ಈದ್ಗಾ ಮೈದಾನಗಳನ್ನು ಹಂತ ಹಂತವಾಗಿವ ಅಭಿವೃದ್ದಪಡಿಸಲಾಗುವದು ಎಂದು ತಿಳಿಸಿದರು.
ಅವಕಾಶ ದೊರೆತಾಗ ಜನರ ಸೇವೆ ಮಾಡಿಬೇಕಾಗಿರುವದು ನಮ್ಮ ಕರ್ತವ್ಯವಾಗಿದೆ ಎಂದರು. ಮುಸ್ಲಿ ಹಬ್ಬದ ನಿಮಿತ್ಯವಾಗಿ ಇಲ್ಲಿನ ಈದ್ಗಾ ಮೈದಾನದಲ್ಲಿ ಸಮಾಜ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮೈದಾನಕ್ಕೆ ಆವರಣ ಗೋಡೆ ನಿರ್ಮಿಸುವಂತೆ ಹಲವಾರು ದಿನಗಳಿಂದ ಇಲ್ಲಿನ ಜನರ ಬೇಡಿಕೆಯಾಗಿತ್ತು ಅದಕ್ಕಾಗಿ ಅವರ ಮನವಿಯ ಮೇರೆಗೆ ನಿರ್ಮಾಣ ಮಾಡಲಾಗುತ್ತದೆ ಎಂದರು. ಈ ಭಾಗದಲ್ಲಿ ಹಜ್ ಹಾಗೂ ವಕ್ಪ ಬೋರ್ಡದಿಂದ ಹೆಚ್ಚಿನ ಅನುದಾನ ನೀಡಲಾಗುವದು ಎಂದರು.ಮುಸ್ಲಿಂ ಭಾಂಧವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿನ ಚಿಕ್ಕೋಡಿಯಲ್ಲಿ ವಕ್ಪ್ ಬೋರ್ಡ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ,ಉಪಾಧ್ಯಕ್ಷ ಸಂಜಯ ಕವಟಗಿಮಠ, ಚಿಕ್ಕೋಡಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವತಪುರ,ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅದಮ ಗಣೇಶವಾಡಿ,ಸಂತೋಷ ಜೊಗಳೆ,ವಕ್ಪ ಬೋರ್ಡ ಅಧ್ಯಕ್ಷ ಅನ್ವರ ದಾಡಿವಾಲೆ,ಉಪಾಧ್ಯಕ್ಷ ಶಬ್ಬಿರ ಮುಲ್ಲಾ,ವಿಶ್ವನಾಥ ಕಾಮಗೌಡ,ಸಿದ್ದಪ್ಪಾ ಡಂಗೇರ ಉಪಸ್ಥಿತರಿದ್ದರು.
ಕೆಲಸಕ್ಕೆಂದು ಹೋದ ವ್ಯಕ್ತಿ ಏಕಾಏಕಿ ನಾಪತ್ತೆ
https://pragati.taskdun.com/latest/belagavimanmissing/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ