
ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಮುಸ್ಲಿಂ ಮಹಿಳೆಯರು
ಪ್ರಗತಿವಾಹಿನಿ ಸುದ್ದಿ, ವಾರಣಾಸಿ :
ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಯವರನ್ನು ತಮ್ಮ ಸಹೋದರ ಎಂದು ಭಾವಿಸಿ, ಅವರಿಗಾಗಿ ತಾವೇ ಸ್ವತಃ ತಯಾರು ಮಾಡಿದ ರಾಖಿಗಳನ್ನು ಕಳುಹಿಸಿಕೊಡಲಾಗಿದೆ. ನರೇಂದ್ರ ಮೋದಿರವರು ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಯಿಂದ ವಿಜಯ ಸಾಧಿಸಿದ ವಿಚಾರ ನಮಗೆಲ್ಲಾ ಗೊತ್ತೇ ಇದೆ.
ಈಗ ಅಲ್ಲಿನ ಮುಸ್ಲಿಂ ಮಹಿಳೆಯರು, ನರೇಂದ್ರ ಮೋದಿರವರಿಗೆ ರಾಖಿ ಹಬ್ಬದ ಸಂದರ್ಭ ತಾವೇ ಖುದ್ದು ತಯಾರು ಮಾಡಿರುವ ರಾಖಿಗಳನ್ನು ಕಳುಹಿಸಿಕೊಟ್ಟರು. ಟ್ರಿಬಲ್ ತಲಾಕ್ ರದ್ದು ಗೊಳಿಸಿ, ನಮ್ಮ ಮೇಲೆ ಆಗುತ್ತಿದೆ ಅನ್ಯಾಯವನ್ನು ತಡೆದಿದ್ದಾರೆ ಎನ್ನುತ್ತಾ, ವಾರಣಾಸಿ ಮಹಿಳೆಯರು ರಾಕಿಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಮುಸ್ಲಿಂ ಮಹಿಳೆಯರು ಮೋದಿ ಅವರನ್ನು, “ಮೂರು ಬಾರಿ ತಲಾಖ್ ಎಂದು ಕರೆಯುವ ಮೂಲಕ ವಿಚ್ಚೇದನವನ್ನು ಅಪರಾಧೀಕರಿಸುವ ಕಾನೂನನ್ನು ತಂದಿದ್ದಾರೆ” ಎಂದು ಹೊಗಳಿದ್ದಾರೆ. ಅವರು ತಮ್ಮದೇ ಆದ ರಾಖಿಗಳನ್ನು ತಯಾರಿಸಿ ಮೋದಿಗೆ ಕಳುಹಿಸಿದರು. ಈ ರಾಖಿಗಳನ್ನು ತಮ್ಮನ್ನು ದುರಾಚಾರದಿಂದ ರಕ್ಷಿಸಿದ ಸಹೋದರ ಎಂದು ಭಾವಿಸಿ ಕಳುಹಿಸಲಾಗುತ್ತಿದೆ, ಎಂದು ತಿಳಿಸಿದ್ದಾರೆ..
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ