ಬೇರೆ ಸಮಾಜದ ಸಮಾಜ ಸೇವಕರಿಲ್ಲವೇ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರಿನ ಪಾದರಾಯನಪುರದ ಎಲ್ಲ ಹನ್ನೊಂದು ರಸ್ತೆಗಳಿಗೂ ಮುಸ್ಲಿಂ ಸಮಾಜದವರ ಹೆಸರಿಡುವುದಕ್ಕೆ ಸಂಸದರಾದ ಅನಂತಕುಮಾರ ಹೆಗಡೆ ಹಾಗೂ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂರ ಹೆಸರಿಡುವುದಕ್ಕೆ ಅನಂತಕುಮಾರ ಹೆಗಡೆ ತೀವ್ರ ವಿರೋಧ
ಬೇರೆ ಸಮಾಜದಲ್ಲಿ ಸಮಾಜಸೇವಕರಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡಬೇಕೆಂದು ಬಿಬಿಎಂಪಿ ಸಭೆಯಲ್ಲಿ ತೀರ್ಮಾನವಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲ 11 ರಸ್ತೆಗಳಿಗೂ ಒಂದೇ ಸಮಾಜದ ಹೆಸರನ್ನು ಆಯ್ಕೆ ಮಾಡಿ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಬಿಬಿಎಂಪಿಯ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಇಬ್ಬರು ಸಂಸದರೂ ಪತ್ರ ಬರೆದಿದ್ದಾರೆ. ಒಂದೊಮ್ಮೆ ಹಾಗೆ ಮಾಡದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದೂ ಎಚ್ಚರಿಸಿದ್ದಾರೆ.
ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವ ರಸ್ತೆಗೆ, ಯಾರ ಹೆಸರು? ಸಮಗ್ರ ವಿವರ ಇಲ್ಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ