ಮುತಗಾ: ರಸ್ತೆ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುತಗಾ ಗ್ರಾಮದ ಪಾಟೀಲ ಹಾಗೂ ಗೋಕುಲ್ ನಗರಗಳ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ನಿಮ್ಮೆಲ್ಲರ ಆಶಿರ್ವಾದದಿಂದ ರಾಜ್ಯದ ಮಂತ್ರಿಯಾಗುವ ಸೌಭಾಗ್ಯ ಒದಗಿ ಬಂದಿದೆ. ನಿಮ್ಮ ಸೇವೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದೆ. ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಜೊತೆಗೆ ಹಲವಾರು ಶಾಶ್ವತ ಯೋಜನೆಗಳನ್ನು ತರಲು ಕಾರ್ಯಪ್ರವೃತ್ತಳಾಗಿದ್ದೇನೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ವೇಳೆ ಶ್ಯಾಮ್ ಮುತಗೇಕರ್, ಸ್ನೇಹಲ್ ಪೂಜೇರಿ, ಗಜು ಕಣಬರ್ಕರ್, ಭೀಮಸೇನ ಓಬಣ್ಣಗೋಳ, ಕೃಷ್ಣ, ಪಿಂಟು ಮಲ್ಲವ್ವಗೋಳ, ಪಿಂಟು ಪೂಜೇರಿ, ವಿನಾಯಕ ಪೂಜೇರಿ, ಸೋಮು ಸಣ್ಣಮನಿ, ನಾಗೇಶಣ್ಣ ದೇಸಾಯಿ, ಎಚ್.ಆರ್.ನಂದೂರಕರ್, ವೆಂಕಟೇಶ ತಿಗಡಿ, ರಮೇಶ ತೋಟಗಿ, ಜ್ಯೋತಿಬಾ ಮೋಹಿತೆ, ರವಿ ಕೊಟಬಾಗಿ, ಪ್ರಭಾಕರ್ ಅಳಾವರ್, ಪ್ರಶಾಂತ ಪವಾರ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಇದೇ ವೇಳೆ, ಮುತಗಾ ಗ್ರಾಮದ ಸಾಯಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಸಾಯಿ ಮಂದಿರ ಕಟ್ಟಡದ ಪ್ರಗತಿ ಪರಿಶೀಲನೆಯನ್ನು ನಡೆಸಿದ ಸಚಿವರು, ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಯುವಂತೆ ನಿಗಾವಹಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ