Kannada NewsKarnataka NewsLatest

​ ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿ ತೆಗೆದುಹಾಕುವುದೇ ನನ್ನ ಸಂಕಲ್ಪ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್     ​

​ ಸರಕಾರದ ಮಟ್ಟದಲ್ಲಿ ಹೋರಾಟಮಾಡಿ ಅನುದಾನ ತರುತ್ತಿದ್ದೇನೆ ​

​​

ಪ್ರಗತಿವಾಹಿನಿ ಸುದ್ದಿ, ​ ಬೆಳಗಾವಿ–  ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕಿರುವ ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿಯನ್ನು ತೆಗೆದುಹಾಕುವುದೇ ನನ್ನ ಸಂಕಲ್ಪ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಬಾಳೇಕುಂದ್ರಿ ಕೆ. ಎಚ್ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಶಾಸಕರ ನಿಧಿಯ (MLA Fund) ವತಿಯಿಂದ ​8 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆಯ ಎರ​ಡೂ​ ಬದಿಗೆ ಕಾಂಕ್ರೀಟ್ ಗಟಾರ್ ನಿರ್ಮಾಣದ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆಯನ್ನು ​ನೀಡಿ ಅವರು ಮಾತನಾಡಿದರು. 
ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದಿನಿಂದಲೂ ಅಭಿವೃದ್ಧಿ ವಂಚಿತವಾಗಿದೆ. ಬೆಳಗಾವಿ ನಗರದ ಮಗ್ಗುಲಲ್ಲೇ ಇದ್ದರೂ ಸರಕಾರದ ಯಾವುದೇ ಸೌಲಭ್ಯ ಈ ಕ್ಷೇತ್ರಕ್ಕೆ ಸಿಗುತ್ತಿರಲಿಲ್ಲ. ಹಾಗಾಗಿ ಕ್ಷೇತ್ರಕ್ಕೆ ಹಿಂದುಳಿದ ಕ್ಷೇತ್ರ ಎನ್ನುವ ಹೆಸರು ಬಂದಿದೆ. ಇಲ್ಲಿಯ ಜನರು ಅಭಿವೃದ್ಧಿ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಲು ಏನು ಅನ್ಯಾಯ ಮಾಡಿದ್ದಾರೆ? ಎಲ್ಲ ಕಡೆ ಅಭಿವೃದ್ಧಿ ವೇಗವಾಗಿ ನಡೆಯುತ್ತಿದ್ದರೆ ಇಲ್ಲಿಯ ಜನರಿಗೆ ಮಾತ್ರ ತಲುಪದಿದ್ದರೂ ಸುಮ್ಮನಿರಬೇಕೇ? ಎಂದು ಹೆಬ್ಬಾಳಕರ್ ಪ್ರಶ್ನಿಸಿದರು.
ನಾನು ಶಾಸಕಿಯಾಗುವುದಕ್ಕೂ ಮೊದಲು ಈ ಕ್ಷೇತ್ರದ ಪರಿಸ್ಥಿತಿ ನೋಡಿ ಮನಕಲುಕುತ್ತಿತ್ತು. ಆ ಸಂದರ್ಭದಲ್ಲೇ ಈ ಕ್ಷೇತ್ರವನ್ನು ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಅಭಿವೃದ್ಧಿ ಮಾಡಿ ಆದರ್ಶ ಕ್ಷೇತ್ರವನ್ನಾಗಿಸಬೇಕೆನ್ನುವ ಯೋಚನೆ ಮಾಡುತ್ತಿದ್ದೆ. ನಿಮ್ಮೆಲ್ಲರ ಆಶಿರ್ವಾದದಿಂದ ಶಾಸಕಿಯಾಗಿ ಆಯ್ಕೆಯಾಗಿ ಅಂತಹ ಅವಕಾಶ ಸಿಕ್ಕಿದೆ. ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಕ್ಷೇತ್ರದ ಸೇವೆ ಮಾಡುತ್ತಿದ್ದೇನೆ. ಸರಕಾರದ ಮಟ್ಟದಲ್ಲಿ ಹೋರಾಟಮಾಡಿ ಅನುದಾನ ತರುತ್ತಿದ್ದೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ಯಾರು ಏನೇ ಹೇಳಿದರೂ ನಾನು ಕ್ಷೇತ್ರದ ಜನರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ನನ್ನ ಗುರಿ ಒಂದೇ, ಅದು ಕ್ಷೇತ್ರದ ಅಭಿವೃದ್ಧಿ. ಜನರ ನೆಮ್ಮದಿಯಲ್ಲೇ ನಾನೂ ನೆಮ್ಮದಿ ಕಾಣುತ್ತೇನೆ. ನಿಮ್ಮ ಮುಖದಲ್ಲಿ ಶಾಶ್ವತವಾಗಿ ನಗು ಕಾಣುವುದೇ ನನ್ನ ಬಯಕೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕಲ್ಲಪ್ಪ ರಾಮಚನ್ನವರ, ಶೈಬಾಜ್ ಶೇಖ್, ಪರುಶರಾಮ ಬಾಗಣ್ಣವರ, ಶೀತಲ್ ಜಕ್ಕಣ್ಣವರ, ಚಂದ್ರಕಾಂತ ಧರೆಣ್ಣವರ, ವಿಠ್ಠಲ ಕುರುಬರ, ರಾಕೇಶ್ ಬುರುಡ, ರಮನ್ ರಾಮಚನ್ನವರ, ಮನೋಜ ಕಾಚುಗೋಳ, ಇಂದ್ರಜಿತ್ ಕಾಚುಗೋಳ, ಅರ್ಜುನ ಕಾಂಬಳೆ, ವಿವೇಕ ಕಾಚುಗೋಳ, ಮಹೇಶ ಸಂಗೆಣ್ಣವರ, ಪವನ ಜಾಧವ್, ತಾಲೂಕ್ ಪಂಚಾಯತ್ ಸದಸ್ಯ ನಿಲೇಶ್ ಚಂದಗಡ್ಕರ್​, ಗ್ರಾಮದ ಹಿರಿಯರು, ಯುವಕ ಮಂಡಳದವರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button