Kannada NewsKarnataka NewsLatest

*ಹಳಿಯಾಳದಲ್ಲಿ ಭೀಕರ ಅಪಘಾತ; ರಸ್ತೆ ಬದಿ ನಿಂತಿದ್ದ ಯುವಕನಿಗೆ ತೀವ್ರ ಪೆಟ್ಟು*

ಪ್ರಗತಿವಾಹಿನಿ ಸುದ್ದಿ: ಹಳಿಯಾಳ ಪಟ್ಟಣದ ಬೆಳಗಾವಿ ರಸ್ತೆಯಲ್ಲಿ ಭೀಕರ ಅಪಘಾತ ಸಂಜೆ 5.00 ಸುಮಾರಿಗೆ ಸಂಭವಿಸಿದೆ. ಹೊಂಡಾ ಶೋ ರೂಂ ಎದುರಿನ ರಸ್ತೆಯ ಎಡ ಬದಿಯಲ್ಲಿ ಬೈಕಿನ ಮೇಲೆ ಕುಳಿತುಕೊಂಡು, ಮಂಜುನಾಥ ಮಾರುತಿ ಮೌರ್ಯ ಸುಮಾರು (35 ವರ್ಷ) ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಆಚೆ ಕಡೆಯಿಂದ ಬರುತ್ತಿದ್ದ KA22, D 4770 ನಂಬರಿನ ಕಾರು ರಭಸವಾಗಿ ಬಂದು, KA 65, J7091 ನಂಬರಿನ ಬೈಕ್ ಅನ್ನು ಬೈಕ್ ಸವಾರನ ಸಮೇತ 30 ಅಡಿ ದೂರಕ್ಕೆ ಎಳೆದು ಕೊಂಡು ಹೋಗಿದೆ. ಗುದ್ದಿದ ರಭಸಕ್ಕೆ ಬೈಕ್ ಎರೆಡು ತುಂಡಾಗಿದೆ.

Home add -Advt

ರಸ್ತೆಯ ಎಡ ಬದಿಯಲ್ಲಿ ರಸ್ತೆಯಿಂದ ಕೆಳಗಿದ್ದ ಬೈಕ್ ನ್ನು ರಾಂಗ್ ಸೈಡಿನಿಂದ ಬಂದು ಗುದ್ದಿದೆ ಎಂಬುದೇ ಅಚ್ಚರಿ. ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ. ಕಾರಿನಲ್ಲಿ ಇದ್ದ ನಾಲ್ವರಲ್ಲಿ ಮೂವರು ಪರಾರಿಯಾಗಿದ್ದು, ಒಬ್ಬರು ಸಿಕ್ಕಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಗಾಯಾಳು ಮಂಜುನಾಥ್ ಮೌರ್ಯನನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರುಶೀಲನೆ ನಡೆಸಿದ್ದಾರೆ.

Related Articles

Back to top button