Latest

*ದಸರಾ ಆನೆ ಮೇಲೆ ಗುಂಡಿನ ದಾಳಿ; ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ದಸರಾ ಆನೆ ಗುಂಡಿನ ದಾಳಿ ನಡೆಸಿದ್ದ ಆರೋಪಿ ಜಮೀನು ಮಾಲೀಕನನ್ನು ಪೊಲಿಸರು ಬಂಧಿಸಿದ್ದಾರೆ.

ಸುರೇಶ್ ಬಂಧಿತ ಆರೋಪಿ. ಮೈಸೂರು ದಸರಾ ಆನೆ ಬಲರಾಮನ ಮೇಲೆ ಸುರೇಶ್ ಗುಂಡೇಟು ಹೊಡೆದಿದ್ದ. ಪಿರಿಯಾಪಟ್ಟಣದ ಭೀಮನಕಟ್ಟೆ ಸಾಕಾನೆ ಶಿಬಿರದ ಬಳಿಯ ಜಮೀನಿಗೆ ಬಲರಾಮ ಆನೆ ಹೋಗಿತ್ತು. ಈ ವೇಳೆ ಜಮೀನಿನ ಮಾಲೀಕ ಸುರೇಶ್ ಆನೆ ಮೇಲೆ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿದ್ದ.

ಬಲರಾಮ ಆನೆಯ ತೊಡೆಯ ಭಾಗಕ್ಕೆ ಗುಂಡೇಟು ತಗುಲಿ ಗಾಯಗೊಂಡಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ಸುರೇಶ್ ಆನೆಗೆ ಚಿಕಿತ್ಸೆ ನೀಡಿ ಬಲರಾಮ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.

ಇದೀಗ ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಆನೇ ಮೇಲೆ ಗುಂಡೇಟು ಹೊಡೆದ ಸುರೇಶ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ.

Home add -Advt

*PWD ಮುಖ್ಯ ಕಚೇರಿಯಲ್ಲಿಯೇ ಕಳ್ಳತನ*

https://pragati.taskdun.com/pwd-officetheftcomputerfilesbangalore/

Related Articles

Back to top button