ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಯುದ್ದ ವಿಮಾನಗಳ ಏರ್ ಶೋ ಸಂದರ್ಭದಲ್ಲಿ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಉಂಟಾಗಿದೆ.
ಸೂರ್ಯಕಿರಣ ಜೆಟ್ ವಿಮಾನಗಳ ಮಧ್ಯೆ ಡಿಕ್ಕಿ ಉಂಟಾಗಿದೆ. ಇದರಿಂದಾಗಿ ಎರಡೂ ವಿಮಾನಗಳು ನೆಲಕ್ಕುರುಳಿವೆ. ಪೈಲಟ್ ಗಳಿಬ್ಬರೂ ಪ್ಯಾರಾಚ್ಯೂಟ್ ಸಹಾಯದಿಂದ ಜಿಗಿದಿದ್ದಾರೆ. ಅಧಿಕೃತವಾಗಿ ನಾಳೆಯಿಂದ ಏರ್ ಶೋ ನಡೆಯಲಿದ್ದು ಇಂದು ತಾಲೀಮು ನಡೆಯುತ್ತಿತ್ತು.
ಅಪಘಾತಕ್ಕೊಳಗಾದ ವಿಮಾನದಲ್ಲಿ ಇನ್ನೂ ಯಾರಾದರೂ ಇದ್ದರೋ ಎನ್ನುವುದು ಗೊತ್ತಾಗಿಲ್ಲ.
ಹೆಚ್ಚಿನ ವಿವರ ಇನ್ನಷ್ಟೆ ಸಿಗಬೇಕಿದೆ.