ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಬನ್ನಿಮಂಟಪ ತಲುಪಿದ್ದು, ಅದ್ದೂರಿ ದಸರಾ ಜಂಬೂ ಸವಾರಿ ಮೆರವಣಿಗೆ ಸಂಪನ್ನವಾಯಿತು.
ಅರಮನೆ ಆವರಣದಲ್ಲಿ ಸಂಜೆ 5.9ಕ್ಕೆ ಶುಭ ಮೀನ ಲಗ್ನದಲ್ಲಿ ಚಾಲನೆ ದೊರೆತಿದ್ದ ಜಂಬೂ ಸವಾರಿ ಮೆರವಣಿಗೆ ಸಂಜೆ 7;25ಕ್ಕೆ ಬನ್ನಿಮಂಟಪ ತಲುಪಿತು. ಅಲ್ಲಿ ಟಾರ್ಚ್ ಲೈಟ್ ಪರೇಡ್, ಪಂಜಿನ ಮೆರವಣಿಗೆಯೊಂದಿಗೆ ಮೈಸೂರು ದಸರಾ ಮಹೋತ್ಸವ-2023ಕ್ಕೆ ತೆರೆಬೀಳಲಿದೆ.
ಸತತ ನಾಲ್ಕನೇ ಬಾರಿಗೆ ಅಭಿಮನ್ಯು ಆನೆ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಿತು. ಅಭಿಮನ್ಯು ಜೊತೆಗೆ 13 ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. ಲಕ್ಷಾಂತರ ಜನರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ