*ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರನ್ನು ಆಹ್ವಾನಿಸಿದ ಮೈಸೂರು ಜಿಲ್ಲಾಡಳಿತ*

ಪ್ರಗತಿವಾಹಿನಿ ಸುದ್ದಿ: ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ನಾಡ ಹಬ್ಬ ದಸರಾ ಉದ್ಘಾಟನೆಗೆ ಸರ್ಕಾರ ಆಯ್ಕೆ ಮಾಡಿದ್ದೆ ತಡ, ಇದಕ್ಕೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಇತ್ತ ವಿರೋಧದ ನಡುವೆಯು ಬಾನು ಮುಷ್ತಾಕ್ ಅವರನ್ನು ಮೈಸೂರು ಜಿಲ್ಲಾಡಳಿತ ಅಧಿಕೃತವಾಗಿ ದಸರಾಗೆ ಆಹ್ವಾನ ನೀಡಿದೆ
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಆಯ್ಕೆಯಾಗಿರುವ ಕನ್ನಡದ ಖ್ಯಾತ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಮೈಸೂರು ಜಿಲ್ಲಾಡಳಿತ ಇಂದು ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.
ಹಾಸನದಲ್ಲಿ ಇರುವ ಬಾನು ಮುಸ್ತಾಕ ಅವರ ಮನೆಗೆ ಮೈಸೂರಿನಿಂದ ಆಗಮಿಸಿದ ದಸರಾ ಆಚರಣೆಯ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಡಾ.ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವರಾಜ್, ಚಾಮುಂಡಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಮೈಸೂರು ಪಾಲಿಕೆ ಆಯುಕ್ತ ತನ್ನೀರ್ ಆಸಿಫ್ ಮೊದಲಾದ ಅಧಿಕಾರಿಗಳ ತಂಡ ಆಗಮಿಸಿ ಬಾನು ಮುಸ್ತಾಕ್ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಆನೆ ವಿಗ್ರಹ ನೀಡಿ ಆತ್ಮೀಯವಾಗಿ ಸನ್ಮಾನಿಸಿದ ನಂತರ ದಸರಾ ಆಹ್ವಾನ ಪತ್ರಿಕೆ ನೀಡಿ ತಾವು ಮೈಸೂರಿಗೆ ಆಗಮಿಸಿ, ನಾಡಹಬ್ಬಕ್ಕೆ ಶುಭ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
ಕುಟುಂಬ ಸಮೇತರಾಗಿ ದಸರಾ ಹಬ್ಬಕ್ಕೆ ಬರಬೇಕೆಂದ ಮೈಸೂರು ಡಿ.ಸಿ. ಲಕ್ಷ್ಮಿಕಾಂತ ರೆಡ್ಡಿ ಆಹ್ವಾನಿಸಿದರು. ಈ ಆಹ್ವಾನವನ್ನು ಬಾನು ಮುಷ್ತಾಕ್ ಅವರು ಸಂತೋಷದಿಂದ ಸ್ವೀಕರಿಸಿದ್ದಾರೆ. ಈ ವೇಳೆ ಬಾನು ಮುಷ್ತಾಕ್ ಅವರು ಕುಟುಂಭ ಸದಸ್ಯರು ಉಪಸ್ಥಿತ ಇದ್ದರು.