Kannada NewsKarnataka NewsLatest
*ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗುವಾಗ ಮಗನ ಕೈಗೆ ಸಿಕ್ಕಿಬಿದ್ದ ಆರೋಪಿ*

ಪ್ರಗತಿವಾಹಿನಿ ಸುದ್ದಿ: ಕುಡಿತದ ಚಟಕ್ಕೆ ಪತ್ನಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಮಹಾಶಯ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಹದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಗಾಯತ್ರಿ ಕೊಲೆಯಾದ ಮಹಿಳೆ. ಪಾಪಣ್ಣ ಪತ್ನಿಯನ್ನೇ ಕೊಲೆಗೈದ ಪತಿ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಪಾಪಣ್ಣ, ಕುಡಿತದ ಚಟಕ್ಕೆ ಬಿದ್ದಿದ್ದ. ಸಾಲ ಮಾಡಿಕೊಂಡು ಪತ್ನಿ-ಮಕ್ಕಳನ್ನು ಪೀಡಿಸುತ್ತಿದ್ದ.
ಹಣ ನೀಡುವಂತೆ ಪತ್ನಿ ಜೊತೆ ಜಗಳವಾಡಿದ್ದ ಪಾಪಣ್ಣ, ಹೆಂಡತಿ ಒಪ್ಪದಿದ್ದಾಗ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಪತ್ನಿ ಸಾಅವನ್ನಪ್ಪುತ್ತಿದ್ದಂತೆ ಮನೆಯಿಂದ ಎಸ್ಕೇಪ್ ಆಗಲು ಮುಂದಾಗುತ್ತಿದ್ದಂತೆ ಮಗನ ಕೈಗೆ ಸಿಕ್ಕಿಬಿದ್ದಿದ್ದಾನೆ. ತಂದೆಯ ವಿರುದ್ಧ ವಿಜಯನಗರ ಠಾಣೆಗೆ ಮಗ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.