Karnataka News
*ಭೀಕರ ಸರಣಿ ಅಪಘಾತ: ಸ್ಥಳದಲ್ಲೇ ಓರ್ವ ಸಾವು; ಡಿಕ್ಕಿ ರಭಸಕ್ಕೆ ಕಾವೇರಿ ನದಿಗೆ ಹಾರಿ ಬಿದ್ದ ಮಹಿಳೆ ಕಣ್ಮರೆ*

ಪ್ರಗತಿವಾಹಿನಿ ಸುದ್ದಿ: ಎರಡು ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಿಳೆ ಸೇತುವೆಯಿಂದ ಕಾವೇರಿ ನದಿಗೆ ಹಾರಿ ಬಿದ್ದು ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಸೇತುವೆ ಮೇಲೆ ನಡೆದಿದೆ.
ಅಪಘಾತದ ರಭಸಕ್ಕೆ ಬೈಕ್ ನಲ್ಲಿದ್ದ ಮಗ ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಂಕರ್ ತಾಯಿ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿ ಬಿದ್ದಿದ್ದಾರೆ. ಪಾರ್ವತಿ ನದಿಗೆ ಬಿದ್ದು ನಾಪತ್ತೆಯಾಗಿರುವ ಮಹಿಳೆ. ಶಂಕರ್ ಹಾಗೂ ತಾಯಿ ಪಾರ್ವತಿ ಮೈಸೂರಿನ ಕರಕುಶಲ ನಗರ ನಿವಾಸಿಗಳು.
ಕಾವೇರಿ ನದಿಗೆ ಬಿದ್ದಿರುವ ಮಹಿಳೆಗಗೈ ಅಗ್ನಿಶಾಮಕ ಸಿಬಂದಿ ಹಾಗೂ ಬನ್ನೂರು ಠಾಣೆ ಪೊಲೀಸರು ಸಂಜೆವರೆಗೂ ಶೋಧ ನಡೆಸಿದರೂ ಪತ್ತೆಯಾಗಿಲ್ಲ. ಕತ್ತಲಾವರಿಸುತ್ತಿದ್ದಂತೆ ಶೋಧಕಾರ್ಯ ನಿಲ್ಲಿಸಲಾಗಿದೆ.