ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇಬ್ಬರು ಐಎ ಎಸ್ ಅಧಿಕಾರಿಗಳ ಜಟಾಪಟಿ ತಾರಕಕ್ಕೇರಿದೆ.
ಸಿಎಸ್ ಆರ್ ಫಂಡ್ ಬಳಕೆ, ವಾರ್ಡ್ ವೈಸ್ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅಸಮಾಧನವಿದ್ದರೆ ವ್ಯವಸ್ಥೆ ಪ್ರಕಾರ ದೂರು ನೀಡಲಿ. ನಮ್ಮ ವಿರುದ್ಧ ಕೋವಿಡ್ ವಿರುದ್ಧ ಹೊರತು ಬೇರಾವ ವಿಚಾರಗಳ ಬಗ್ಗೆ ಚರ್ಚೆ ಬೇಡ ಎಂದು ಸೂಚಿಸಿದ್ದೆ. ಇದೇ ಕಾರಣಕ್ಕೆ ನನ್ನ ವಿರುದ್ಧ ಶಿಲ್ಪಾ ನಾಗ್ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುಡುಗಿದ್ದಾರೆ.
ಅಲ್ಲದೇ 12 ಕೋಟಿ ರೂ ಸಿಎಸ್ ಆರ್ ಫಂಡ್ ಹಣ ಖರ್ಚಾಗಿದ್ದು ಹೇಗೆ ? ಒಂದು ದಿನ 400 ಕೊರೊನಾ ಪಾಸಿಟಿವ್ ಕೇಸ್ ಎಂದು ಮಾರನೆ ದಿನ 40 ಕೇಸ್ ಎಂದು ವರದಿ ನೀಡಿದರೆ ಹೇಗೆ ಈ ಬಗ್ಗೆಯೂ ಪ್ರಶ್ನಿಸಿದ್ದೆ. ಎಲ್ಲಾ ಬೆಳವಣಿಗೆ ಬಗ್ಗೆ ನಾನು ಮುಖ್ಯಕಾರ್ಯದರ್ಶಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದರು.
ರೋಹಿಣಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನನ್ನ ರಾಜೀನಾಮೆ ದುಡುಕಿನ ನಿರ್ಧಾರವಲ್ಲ ನೋವಿನಿಂದ ರಾಜೀನಾಮೆ ನೀಡಿದ್ದೇನೆ. ಸಿಎಸ್ ಆರ್ ಫಂಡ್ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೆ. ಆಸ್ಪತ್ರೆಗಳಲ್ಲಿ ಮಾತ್ರೆ ಹಾಗೂ ವೈದ್ಯರ ನೇಮಕಕ್ಕಾಗಿ ಅದನ್ನು ಬಳಕೆ ಮಾಡಲಾಗಿದೆ. ನಾನು ಮಾಡಿದ್ದೇ ಸರಿ ಎಂದು ಡಿಸಿ ಅಹಂಕಾರ ತೋರಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಒಟ್ಟಾರೆ ಕೋವಿಡ್ ಸಾಂಕ್ರಾಮಿಕ ರೋಗದ ಆರೋಗ್ಯ ತುರ್ತು ಪರಿಸ್ಥಿತಿ ನಡುವೆ ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ತಾರಕಕ್ಕೇರಿದೆ.
ರೆಪೋ, ರಿಸರ್ವ್ ರೆಪೋ ಬದಲಾವಣೆ ಇಲ್ಲ; ಆರ್ ಬಿಐ ಹಣಕಾಸು ನೀತಿ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ