Latest

ಹೆಂಡತಿಗೂ ಬೆಡ್ ವ್ಯವಸ್ಥೆ ಮಾಡಲಾಗುತ್ತಿಲ್ಲ; ಜಿಲ್ಲಾ ಆರೋಗ್ಯಾಧಿಕಾರಿಯ ಅಸಹಾಯಕತೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪತ್ನಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗದ ಸ್ಥಿತಿಯಲ್ಲಿದ್ದೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಯೇ ಅಸಹಾಯಕತೆ ತೋಡಿಕೊಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೊರೊನಾ ಸೋಂಕಿತರ ಕುಟುಂಬದವರೊಬ್ಬರು ಮೈಸೂರು ಆರೋಗ್ಯಾಧಿಕಾರಿ ಅಮರನಾಥ್ ಅವರಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿದ್ದಾರೆ. ಇದಕ್ಕೆ ಡಿಹೆಚ್ ಒ ವಾರ್ ರೂಂ ಗೆ ಕರೆ ಮಾಡಿ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದ್ದಾರೆ. ವಾರ್ ರೂಂ ಗೆ ಕರೆ ಮಾಡಿದರೆ ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ,  ಬೆಡ್ ವ್ಯವಸ್ಥೆ ಮಾಡಿಕೊಡಿ ಎಂದು ಹೇಳಿದ್ದಾರೆ. ನನಗೆ ಬೆಡ್ ಕೊಡಿಸಲು ಸಾಧ್ಯವಿಲ್ಲ. ನನ್ನ ಪತ್ನಿಗೇ ಬೆಡ್ ವ್ಯವಸ್ಥೆ ಮಾಡುವ ಯೋಗ್ಯತೆ ಇಲ್ಲದಾಗಿದೆ. ನನ್ನ ಕೈ ಸೋತುಹೋಗಿದೆ ನನ್ನಿಂದ ಸಾಧ್ಯವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ ಡಿಹೆಚ್ ಒ.ಆರೋಗ್ಯಾಧಿಕಾರಿಯಾಗಿ ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಕೆಲಸ ಬಿಟ್ಟು ಹೋಗುವಂತೆ ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ಆರೋಗ್ಯಾಧಿಕಾರಿ ನಾನು ಕೆಲಸ ಬಿಡಲು ಕೂಡ ಸಿದ್ಧನಿದ್ದೇನೆ. ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ತೊಂದರೆಯಿಲ್ಲ. ಆದರೆ ನನ್ನಿಂದ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗದ ಸ್ಥಿತಿಯಿದೆ ಎಂದು ಹೇಳಿದ್ದಾರೆ.

Related Articles

ಬೆಡ್ ಸಿಗದೇ ವಿಧಾನಸೌಧಕ್ಕೇ ಸೋಂಕಿತೆಯನ್ನು ಕರೆತಂದ ಕುಟುಂಬಸ್ಥರು

Home add -Advt

Related Articles

Back to top button