Latest

1.20 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ; ಮೂವರು ವಿದ್ಯಾರ್ಥಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಾದಕ ವಸ್ತುಗಳನ್ನು ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆರೋಪಿಗಳಿಂದ 1.20 ಲಕ್ಷ ರೂಮೌಲ್ಯದ 24 ಗ್ರಾಂ ತೂಕದ ಮಾದಕ ವಸ್ತು, 2 ದ್ವಿಚಕ್ರ ವಾಹನ, 2 ಲ್ಯಾಪ್‌ಟ್ಯಾಪ್ ಹಾಗೂ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಪೊಲೀಸರು ಮತ್ತು ಸೆನ್ ಕ್ರೈಂ ಪೊಲೀಸರು ಜಂಟಿಯಾಗಿ ನಗರದ ಬೋಗಾದಿ ಬಳಿಯ ಎಸ್.ಎಂ.ಬಡಾವಣೆ ಬಳಿ ಇರುವ ಮನೆಯೊಂದರ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ತಂದು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ವಾಡುತ್ತಿದ್ದರು ಎಂದು ತಿಳಿದರು ಬಂದಿದೆ.

ಸಿಸಿಬಿ ಘಟಕದ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಶೇಖರ್, ಸಿಬ್ಬಂದಿಗಳಾದ ಸಲೀಂಖಾನ್, ಪಿ.ಎನ್.ಲಕ್ಷ್ಕೀಕಾಂತ, ಪ್ರಕಾಶ್, ಸೆನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುವಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿ ಗ್ರಾಮೀಣ‌ ಡಿಜಿಟಲ್ ಸಾಕ್ಷರತಾ ಅಭಿಯಾನ; ಪ್ರಶಸ್ತಿ ಪ್ರದಾನ

https://pragati.taskdun.com/latest/digital-indianesaragimahantesh-dodagowdera/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button