ಪ್ರಗತಿವಾಹಿನಿ ಸುದ್ದಿ; ಮೈಸೂರು : ಕಬ್ಬಿನ ಬೆಳೆಗೆ ನಿಗದಿ ಪಡಿಸಿರುವ FRP ದರವನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಪಂಜಾಬಿನಲ್ಲಿ ಟನ್ ಕಬ್ಬಿಗೆ 3800,ಉತ್ತರ ಪ್ರದೇಶದಲ್ಲಿ 3500,ಗುಜರಾತ್ ನಲ್ಲಿ 4400, ರೂ. ಗಳನ್ನು ನಿಗದಿ ಯಾಗಿದೆ.ನಮ್ಮ ರಾಜ್ಯದಲ್ಲಿ ಕನಿಷ್ಠ ಟನ್ ಗೆ 3500 ರೂ. ಗಳನ್ನು ನಿಗದಿ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಕಟಾವಿನ ವೇಳೆಯಲ್ಲಿ ಕಾರ್ಖಾನೆಗಳು ಸುಲಿಗೆ ಮಾಡುತ್ತಿವೆ. 16 ತಿಂಗಳು ಆದರೂ ಕಟಾವು ಆಗುತ್ತಿಲ್ಲ. ಕಾರ್ಖಾನೆಗಳಿಗೆ ಮಾರ್ಗ ಸೂಚಿಗಳನ್ನು ಮಾಡಬೇಕು. ರೈತರಿಗೂ ಹಾಗೂ ಕಾರ್ಖಾನೆಗಳಿಗೂ ದ್ವಿಪಕ್ಷಿಯಾ ಒಪ್ಪಂದ ಪತ್ರವನ್ನು ಸರಕಾರ ಜಾರಿಗೆ ತರಬೇಕು ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಬೇಕು ಎಂದು ಪ್ರತಿಭಟನೆ ಮಾಡಿದ್ದರು.
ಗಲಾಟೆ ತಡೆಯಲು ಹೋದ ಇನ್ಸ್ ಪೆಕ್ಟರ್ ಗೆ ಚಾಕುವಿನಿಂದ ಇರಿದ ಯುವಕರು
https://pragati.taskdun.com/latest/police-canstableattackhasana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ