ಪ್ರಗತಿವಾಹಿನಿ ಸುದ್ದಿ; ಮೈಸೂರು: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಮಗಳನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ.
ಶಾಲಿನಿ (17) ಮೃತ ಯುವತಿ. ದ್ವಿತೀಯ ಪಿಯುಸಿ ಓದುತ್ತಿದ್ದ ಶಾಲಿನಿ ಪಕ್ಕದ ಗ್ರಾಮ ಮೆಲ್ಲಹಳ್ಳಿ ಬೋರೆ ಗ್ರಾಮದ ಪರಿಶಿಷ್ಠ ಜಾತಿಗೆ ಸೇರಿದ ಮಂಜು ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಕ್ಲಾಸ್ ಮೇಟ್ ಆಗಿದ್ದರು ಎನ್ನಲಾಗಿದೆ.
ಶಾಲಿನಿಗೆ ಯುವಕನೊಂದಿಗಿನ ಸ್ನೇಹ, ಪ್ರೀತಿಯನ್ನು ಬಿಟ್ಟು ವಿದ್ಯಾಭ್ಯಾಸದ ಕಡೆ ಗಮನ ಕೊಡುವಂತೆ ಪೋಷಕರು ಹೇಳಿದ್ದರು. ಆದರೂ ಶಾಲಿನಿ ಯುವಕನ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರಿಯಕರನಿಗಾಗಿ ಮನೆಯನ್ನೂ ಬಿಟ್ಟಿದ್ದಳು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರ ಮುಂದೆ ಶಾಲಿನಿ ತಾನು ಮನೆಗೆ ಹೋಗಲ್ಲ ಎಂದಿದ್ದಳು. ಯುವತಿ ಇನ್ನೂ ಅಪ್ರಾಪ್ತಳಿದ್ದು 18 ವರ್ಷ ತುಂಬದ ಕಾರಣ ಆಕೆಯನ್ನು ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ಮನೆಗೆ ಕರೆ ಮಾಡಿದ್ದ ಶಾಲಿನಿ ತನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವಂತೆ ಪೋಷಕರಿಗೆ ತಿಳಿಸಿದ್ದಳು. ಪೋಷಕರು ಮಗಳನ್ನು ಮನೆಗೆ ಕರೆತಂದಿದ್ದರು. ಎರಡು ದಿನಗಳ ಹಿಂದೆ ಶಾಲಿನಿ ಮತ್ತೆ ತಾನು ಪ್ರೀತಿಸಿದ ಹುಡುಗನೊಂದಿಗೆ ಹೋಗಬೇಕೆಂದು ಹಠ ಶುರುಮಾಡಿದ್ದಾಳೆ ಎನ್ನಲಾಗಿದೆ. ಇದರಿಂದ ಬೇಸತ್ತ ತಂದೆ ಸುರೇಶ್ ಮಗಳ ಕತ್ತು ಹಿಸುಕಿ ಬೈದಿದ್ದಾರೆ. ಯುವತಿ ಸಾವನ್ನಪ್ಪಿದ್ದಾಳೆ. ಇದೀಗ ಯುವತಿ ಮೃತದೇಹ ಯುವಕನ ಗ್ರಾಮದ ಜಮೀನು ಬಳಿ ಪತ್ತೆಯಾಗಿದ್ದು, ಯುವತಿ ತಂದೆ ಸುರೇಶ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಪ್ರಕರಣ ಸಂಬಂಧ ಇದೀಗ ಯುತಿಯ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಪಿರಿಯಾ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ರಾಜ್ಯಸಭಾ ಚುನಾವಣೆ; ಹೆಚ್ ಡಿ ಕೆ ಜತೆ ಸುರ್ಜೇವಾಲಾ ಚರ್ಚೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ