ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ದಸರಾ ಮಹೋತ್ಸವ 2022ರ ಸಂದರ್ಭದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಮೈಸೂರು ಅರಮನೆ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಬೊಂಬೆಗಳ ಪ್ರದರ್ಶನವನ್ನು ನಡೆಸಿಕೊಟ್ಟಂತಹ ತಂಡಗಳಿಗೆ ಗೌರವ ಸಮರ್ಪಿಸಲಾಯಿತು.
ಭಾನು ಪ್ರಕಾಶ್ ಶರ್ಮಾ – ಸಾಂಪ್ರದಾಯಿಕ ಬೊಂಬೆ ಪ್ರದರ್ಶನಗೀತಾ ಶ್ರೀಹರಿ – ನರಸಿಂಹ ಅವತಾರ
ನಾಗ ಪ್ರಸಾದ್ – 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ
ಹೇಮಲತಾ ಕುಮಾರಸ್ವಾಮಿ – ಶ್ರೀ ದೇವಿ ದಿವ್ಯ ದರ್ಶನ
ಮೀರಾ ರಮೇಶ್ – ಅರಮನೆಯಲ್ಲಿ ದುರ್ಗಾ ಪೂಜೆ
ಅನ್ನಪೂರ್ಣ ಗೋಪಾಲಕೃಷ್ಣ – ವಿಷ್ಣು ಲೀಲೆ
ಲೀಲಾವತಿ – ಮಾನವನ ಜೀವನ ಚಕ್ರ
ಇವರುಗಳಿಗೆ ಅರಮನೆ ಮಂಡಳಿ ವತಿಯಿಂದ ಪ್ರಶಂಸನಾ ಪತ್ರಗಳನ್ನು ಉಪನಿರ್ದೇಶಕರಾದ ಟಿ ಎಸ್ ಸುಬ್ರಮಣ್ಯ ಅವರು ಗೌರವಿಸಿದರು. ಈ ಸಂದರ್ಭದಲ್ಲಿ ಅರಮನೆ ಮಂಡಳಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
10 ದಿನಗಳ ಕಾಲ ನಡೆದ ಬೊಂಬೆಗಳ ಪ್ರದರ್ಶನವನ್ನು ಸುಮಾರು 2 ಲಕ್ಷಕ್ಕೂಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಮೈಸೂರು ದೀಪ ಅಲಂಕಾರಕ್ಕೆ 5.5 ಕೋಟಿ ವೆಚ್ಚ:
ಮೈಸೂರು: ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದರಿಂದ ಸಾರ್ವಜನಿಕರ ಕೋರಿಕೆಯ ಮೇರೆಗೆ ಸೆಸ್ಕ್ ಅಧಿಕಾರಿಗಳು ದೀಪಾಲಂಕಾರವನ್ನು ವಿಸ್ತರಿಸಿದ್ದರು. ದಸರಾ ಉದ್ಘಾಟನೆಯಾದ ಸೆ.26ರಿಂದ ವಿಜಯದಶಮಿ ದಿನವಾದ ಅ.5ರವರೆಗೆ ಮೊದಲು ನಿಗದಿಯಾಗಿತ್ತು.ನಂತರ ಕೋರಿಗೆ ಮೇರೆಗೆ ಅ.10ರವರೆಗೆ ವಿಸ್ತರಿಸಲಾಯಿತು. ಬೇಡಿಕೆ ಹೆಚ್ಚಿದಾಗ ಇನ್ನೂ ಎರಡು ದಿನ (ಅ.12)ದೀಪಾಲಂಕಾರವನ್ನು ವಿಸ್ತರಿಸಿದ್ದರು. ಇದರಿಂದ 15 ದಿನಗಳಿಗೆ ಅಂತ್ಯಗೊಳ್ಳಬೇಕಿದ್ದ ದೀಪಾಲಂಕಾರ 17 ದಿನಗಳ ಕಾಲ ನಡೆಸುವ ಮೂಲಕ ಸಾರ್ವಜನಿಕರ ಮನಸೂರೆಗೊಳ್ಳುವ ಪ್ರಯತ್ನವನ್ನು ಸೆಸ್ಕ್ ಮಾಡಿತ್ತು.
ದಸರಾ ಮಹೋತ್ಸವದ ಪ್ರಯುಕ್ತ ಮೈಸೂರು ನಗರವನ್ನು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಿದ ಸೆಸ್ಕ್‌ಗೆ ಬರೋಬ್ಬರಿ 5.5 ಕೋಟಿ ರೂ. ವೆಚ್ಚವಾಗಿದೆ. 4.5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸೆಸ್ಕ್‌ಗೆ ಮತ್ತೆ 1 ಕೋಟಿ ರೂ.ಹೆಚ್ಚುವರಿಯಾಗಿ ಖರ್ಚಾಗಿದೆ. ಅವಧಿ ವಿಸ್ತರಣೆಯೊಂದಿಗೆ ಹೆಚ್ಚು ದಿನಗಳ ಕಾಲ ದೀಪಾಲಂಕಾರದ ವ್ಯವಸ್ಥೆ ಇದ್ದ ಪರಿಣಾಮ 2.3 ಲಕ್ಷ ಕಿಲೋವ್ಯಾಟ್ ವಿದ್ಯುತ್ ಬಳಕೆಯಾಗಿದೆ.
ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು: ಶಿವಸೇನೆಗೆ ಸಿಎಂ ತಿರುಗೇಟು
https://pragati.taskdun.com/politics/karnataka-bhawanamaharashtrashivasenecm-basavaraj-bommaibelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ