
ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ದಸರಾ ಉದ್ಘಾಟನೆಗೆ ಹಾಗೂ ಜಂಬೂಸವಾರಿಗೆ ಜನರು ಸೇರುವುದು ಯಾಕೆ? ಕೊರೊನಾದಿಂದ ಸಮಸ್ಯೆಯಾದರೆ ಹೊಣೆ ಹೋರುವವರು ಯಾರು ಎಂದು ಸಾಹಿತಿ ಎಸ್.ಎಲ್ ಭೈರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಉದ್ಘಾಟನೆಗೆ 200 ಜನರು ಯಾಕೆ ಭಾಗಿಯಾಗಬೇಕು? ಜಂಬೂಸವಾರಿ ಮಾಡುವವರು ಮಾವುತರು. ಅಂದಮೇಲೆ ಜನರು ಸೇರುವ ಅಗತ್ಯವೇನಿದೆ? ಕೊರೊನಾದಂತಹ ಸಂದರ್ಭದಲ್ಲಿ ಜನರು ಸೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಸಂಪ್ರದಾಯದಂತೆ ಪೂಜೆ ನಡೆಯಲಿ, ಮಾವುತರು ಜಂಬೂಸವಾರಿ ಮಾಡಲಿ. ಆದರೆ ಕೊರೊನಾ ಇರುವುದರಿಂದ ಈಗ ಜನರು ಸೇರಿದರೆ ಸೋಂಕು ಹರಡುವುದಿಲ್ಲವೇ? ಹಾಗಾಗಿ ಜನರನ್ನು ಸೇರಿಸಿ ಬಿಸಿನೆಸ್ ಬಗ್ಗೆ ಯೋಚಿಸುವುದನ್ನು ಬಿಟ್ಟು ಜನರ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ