Latest

ಅವ್ಯಾಹತ ಮಳೆಗೆ ಕುಸಿದ ಕೋಟೆ ಗೋಡೆ; ಕುಸಿತದ ಸಂಭವವಿದ್ದರೂ ನಿರ್ಲಕ್ಷ್ಯದ ಪರಿಣಾಮ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಐತಿಹಾಸಿಕ ಹಿನ್ನೆಲೆಯುಳ್ಳ ಜಗತ್ಪ್ರಸಿದ್ಧ ಮೈಸೂರು ಅರಮನೆಯ ಕೋಟೆ ಗೋಡೆ ಕುಸಿತಕ್ಕೊಳಗಾಗಿದೆ.

ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ನಡುವೆ ಕೋಟೆಯ ಗೋಡೆ ಕುಸಿದುಬಿದ್ದಿದೆ. ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆ‌ಗೆ ದೊಡ್ಡ ಇತಿಹಾಸವಿದೆ. ಅಂದಿನ ಆಳರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ‌ನಿರ್ಮಿಸಲಾಗಿದ್ದ ಕೋಟೆ‌ ನೋಡಲು ಸಹ ಆಕರ್ಷಕವಾಗಿದೆ. ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿದ್ದ ಕೋಟೆ ನಾನಾ ಭಾಗಗಳ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಕೆಲ ದಿನಗಳಿಂದ ಶಿಥಿಲಾವಸ್ಥೆಯಲ್ಲಿತ್ತು.

ನಿರಂತರ ಮಳೆಗೆ ಅರಮನೆಯ ಕೋಟೆ ಕುಸಿಯುವ ಹಂತ ತಲುಪಿತ್ತು. ಕೋಟೆ ದುರಸ್ತಿಗೆ ಅರಮನೆ ಮಂಡಳಿ, ಜಿಲ್ಲಾಡಳಿತ ಮುಂದಾಗಬೇಕಿತ್ತು. ಯಾವ ಕ್ಷಣದಲ್ಲಾದರೂ ಮೈಸೂರು ಅರಮನೆಯ ಐತಿಹಾಸಿಕ ಕೋಟೆ ಕುಸಿಯಲಿದೆ ಎಂಬ ಸುಳಿವಿದ್ದರೂ ಯಾರೊಬ್ಬರೂ ಗಮನಿಸದ ಕಾರಣ ಈ ಅವಘಡ ಸಂಭವಿಸಿದೆ.

ಈ ಬಾರಿ ಮೈಸೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಅದರಲ್ಲೂ ಕಳೆದ 3 ತಿಂಗಳಿಂದ ಹೆಚ್ಚು ಮಳೆಯಾಗಿದ್ದು ಶಿಥಿಲಾವಸ್ಥೆಯಲ್ಲಿದ್ದ ಕೋಟೆ ಕುಸಿತಕ್ಕೆ ಕಾರಣವಾಗಿದೆ. ಅರಮನೆ ಆಡಳಿತ ಮಂಡಳಿ ಈ ಬಗ್ಗೆ ತ್ವರಿತವಾಗಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ವ್ಯಾಪಕ ಒತ್ತಾಯಗಳು ಕೇಳಿಬಂದಿವೆ.

Home add -Advt

ಜೆಡಿಎಸ್ ಪಕ್ಷ ಸಂಘಟನೆ ಕಾರ್ಯಾಗಾರಕ್ಕೆ ಜಿ.ಟಿ. ದೇವೇಗೌಡ ಗೈರು

Related Articles

Back to top button