Kannada NewsKarnataka News

ಪುರಾಣ ಪ್ರವಚನಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ​ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪುರಾಣ ಪ್ರವಚನಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ. ಮಹಾತ್ಮರು ತಮ್ಮ ನುಡಿಗಳಿಂದ ನಮ್ಮ ಜೀವನವನ್ನು ಪಾವನಗೊಳಿಸುತ್ತಾರೆ. ಯುವ ಜನತೆ ಇತ್ತೀಚೆಗೆ ಹೆಚ್ಚಾಗಿ ಆದ್ಯಾತ್ಮದ ಕಡೆಗೆ ಒಲವು ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ​ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರೀಹಾಳ ಗ್ರಾಮದ ಶ್ರೀ ಅಡವಿಸಿದ್ಧೇಶ್ವರ ಮಠದ ಪೂಜ್ಯ ಅಡವಿಸಿದ್ಧೇಶ್ವರ ದೇವರ ನೇ​ತೃತ್ವದಲ್ಲಿ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಐದು ದಿನಗಳ ಕಾಲ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನದ ಕೊನೆಯ ದಿನವಾದ ​ಭಾನುವಾರ ರಾತ್ರಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾ​ಗಿ ಅವರು ಮಾತನಾಡಿದರು.

​ಬೆಳಗಾವಿ ಗ್ರಾಮೀಣ ಕ್ಷೇತ್ರ ಒಂದು ದೃಷ್ಟಿಯಲ್ಲಿ ಆದ್ಯಾತ್ಮದ ಕ್ಷೇತ್ರವೇ ಆಗಿದೆ. ಕ್ಷೇತ್ರದಲ್ಲಿ ಬಹಳಷ್ಟು ಮಠಗಳು, ಮಂದಿರಗಳು, ಪುರಾತನ ಕ್ಷೇತ್ರಗಳಿವೆ. ಅವುಗಳನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ನೆರವನ್ನು ನೀಡುತ್ತ ಬಂದಿದ್ದೇನೆ. ಹಿರಿಯರೊಂದಿಗೆ ಯುವ ಜನತೆಯೂ ಇದಕ್ಕೆ ಕೈ ಜೋಡಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.

​ ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುರಗೋಡ ಮಹಾಂತ ಮಠದ ಶ್ರೀಗಳು, ಕುಂದರಗಿ ಶ್ರೀಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹುರಕಡ್ಲಿ ಅಜ್ಜನವರು ಮನುಕುಲದ ಚಿಂತಕರಾಗಿದ್ದರು – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button