Latest

ಆತ್ಮಹತ್ಯೆಗೆ ಯತ್ನ; ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆತ್ಮಹತ್ಯೆಗೆ ಯತ್ನ ಪ್ರಕರಣ ವಿಚಾರವಾಗಿ ಮಾತನಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್, ಕಳೆದ ಮೂರು ದಿನಗಳ ಹಿಂದೆ ಕುಟುಂಬದ ಕಾರ್ಯಕ್ರಮ, ಕಸೀನ್ ಬ್ರದರ್ ಮದುವೆಯಿತ್ತು. ಅಲ್ಲಿಗೆ ಹೋದಾಗ ಊಟದ ವ್ಯತ್ಯಾಸವಾಗಿ ಅರ್ಜೀರ್ಣವಾಗಿದೆ. ಈ ವೇಳೆ ಯಾವುದೋ ಮಾತ್ರೆ ತೆಗೆದುಕೊಳ್ಳಲು ಹೋಗಿ ನಿದ್ರೆ ಮಾತ್ರೆ ಸೇವಿಸಿಬಿಟ್ಟಿದ್ದೆ. ಆಕಸ್ಮಿಕವಾಗಿ ನಡೆದ ಘಟನೆಯಿದು ಎಂದು ಹೇಳಿದ್ದಾರೆ.

ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್, ನನಗೆ ಯಾವುದೇ ಒತ್ತಡವಿಲ್ಲ. ರಾಜಕೀಯ ಒತ್ತಡಕ್ಕೆ ಮಾತ್ರೆ ತೆಗೆದುಕೊಳ್ಳುವ ವ್ಯಕ್ತಿ ನಾನಲ್ಲ. ಅಜೀರ್ಣಕ್ಕೆ ಮಾತ್ರೆ ತೆಗೆದುಕೊಳ್ಳಲು ಹೋಗಿ ನಿದ್ದೆಮಾತ್ರೆ ಸೇವಿಸಿ ಡ್ರೌಸಿನೆಸ್ ಹೆಚ್ಚಾಗಿದೆ. ಇದರಿಂದ ಆತಂಕಗೊಂಡಿರುವ ಪತ್ನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಕಿಡಿಕಾರಿದ ಸಂತೋಷ್, ಡಿಕೆಶಿಯವರಿಗೆ ಉಪಚುನಾವಣೆ ಸೋಲಿನಿಂದ ಮತಿಕೆಟ್ಟಿದೆ. ಅದಕ್ಕೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.

Home add -Advt

Related Articles

Back to top button