ವಿದ್ವಾನ್ ಅರುಣ ಹೆಗಡೆ, ದೇವಿಮನೆ, ಬೆಳಗಾವಿ
ಶ್ರಾವಣ ಮಾಸದ ವಿಶೇಷ ಹಬ್ಬಗಳಲ್ಲೊಂದು ನಾಗರ ಪಂಚಮಿಆಗಸ್ಟ್ 21 ರಂದು ಈ ಬಾರಿ ಬಂದಿದೆ. ಶ್ರಾವಣ ಮಾಸದ ಸೋಮವಾರ ನಾಗರಪಂಚಮಿ ಹಬ್ಬ ಬಂದಿರುವುದು ವಿಶೇಷ.
10 ವರ್ಷಗಳ ನಂತ್ರ ಈ ಯೋಗ ಬಂದಿದೆ. ನಾಗದೇವ ಶಿವನ ಆಭರಣ. ಸೋಮವಾರ ಶಿವನ ಪ್ರಿಯವಾದ ದಿನ. ನಾಗರಪಂಚಮಿ ಹಾಗೂ ಶ್ರಾವಣ ಸೋಮವಾರ ಒಂದೇ ದಿನ ಬಂದಿರುವುದ್ರಿಂದ ಅದನ್ನು ಸಂಜೀವಿನ ಮಹಾಯೋಗ ವೆಂದು ಕರೆದಿದ್ದಾರೆ.
ಇದಕ್ಕೂ ಮುನ್ನ ಈ ಮಹಾಯೋಗ ಆಗಸ್ಟ್ 16, 1993 ರಲ್ಲಿ, ಹಾಗೂ ಆಗಸ್ಟ್ 5 2013 ರಲ್ಲಿ ಬಂದಿತ್ತು. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ನಾಗರಪಂಚಮಿ ಆಚರಿಸಲಾಗುತ್ತದೆ. ಪಂಚಮಿ ತಿಥಿ ಸೋಮವಾರ ನಾಗ ಪೂಜೆಗೆ ಆಗಸ್ಟ್ 21 ರ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆ 25 ನಿಮಿಷದವರೆಗೆ ಶುಭ ಮುಹೂರ್ತವಿದೆ. ನಂತ್ರ ಬೆಳಿಗ್ಗೆ 9 ಗಂಟೆ 35 ನಿಮಿಷದಿಂದ 11 ಗಂಟೆ 18 ನಿಮಿಷದವರೆಗಿರಲಿದೆ.
ಸಂಜೀವಿನ ಮಹಾಯೋಗ ದಲ್ಲಿ ಪಂಚಮಿಯಂದು ರುದ್ರಭಿಷೇಕ, ಮಹಾಮೃತ್ಯುಂ ಜಯ ಜಪ,ಬಿಲ್ವಾರ್ಚನೆ ಸಹಿತ,ಸರ್ಪಗಳನ್ನು ಪೂಜಿಸುವುದರಿಂದ ನಾಗರಾಜನು ಪ್ರಸನ್ನನಾಗುತ್ತಾನೆಂಬ ಉಲ್ಲೇಖವಿದೆ. ಅಷ್ಟೇ ಅಲ್ಲದೆ ಜಾತಕದಲ್ಲಿ ಕಾಳಸರ್ಪ ದೋಷವಿರುವವರು ಈ ಪಂಚಮಿಯ ಶುಭದಿನದಂದು ಶಿವ ಮತ್ತು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ.
ನಾಗರ ಪಂಚಮಿಯ ದಿನದಂದು 12 ದೇವ ಸರ್ಪಗಳಾದ ಅನಂತ, ವಾಸುಕಿ, ಶೇಷ, ಪದ್ಮ, ಕಂಬಲ, ಅಶ್ವತಾರ, ಶಂಖಪಾಲ, ಧೃತರಾಷ್ಟ್ರ, ತಕ್ಷಕ, ಕಾಳಿಂಗ ಮತ್ತು ಪಿಂಗಲವನ್ನು ಪೂಜಿಸಲಾಗುತ್ತದೆ.
ಮ0ತ್ರ :
”ಸರ್ವೇ ನಾಗಾಃ ಪ್ರಿಯಾಂತಂ ಮೇ ಯೇ ಕೇಚಿತ್ ಪೃಥ್ವೀತಲೇ|
ಯೇ ಚ ಹೆಲಿಮರೀಚಿಸ್ಥಾ ಯೇಂತರೇ ದೀವಿ ಸಂಸ್ಥಿತಾಃ||
ಯೇ ನದೀಷು ಮಹಾನಾಗಾ ಯೇ ಸರಸ್ವತಿಗಾಮಿನಃ|
ಯೇ ಚ ವಾಪೀತಡ್ಗೇಷು ತೇಷು ಸರ್ವೇಷು ವೈ ನಮಃ||”
ನವನಾಗ ಮ0ತ್ರ :
”ಅನಂತಂ ವಾಸುಕಿ ಶೇಷಂ ಪದ್ಮನಾಭಂ ಚ ಕಂಬಲಂ|
ಶಂಖ ಪಾಲಂ ದೃತರಾಷ್ಟ್ರಂ ತಕ್ಷಕಂ ಕಾಳಿಯಂ ತಥಾ||
ಏತಾನಿ ನವ ನಾಮಾನು ನಾಗಾನಾಂ ಚ ಮಹಾತ್ಮನಾಂ|
ಸಾಯಂಕಾಲೇ ಪಠೇನಿತ್ಯಂ ಪ್ರಾತಃ ಕಾಲೇ ವಿಶೇಷತಃ|
ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್||”
ಸರ್ವರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ