Kannada NewsKarnataka NewsLatestPolitics
*ನಳೀನ್ ಕುಮಾರ್ ಕಟೀಲ್ ಗೆ ಕೈ ತಪ್ಪಲಿದೆಯೇ ಬಿಜೆಪಿ ಟಿಕೆಟ್? ಭಾವುಕರಾಗಲು ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ಈ ಬಾರಿ ಹಾಲಿ ಸಂಸದ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ. ಇದೇ ವಿಚಾರವಾಗಿ ಮಾತನಾಡುತ್ತಿದ್ದ ವೇಳೆ ನಳೀನ್ ಕುಮಾರ್ ಕಟೀಲ್ ಭಾವುಕರಾದ ಗಹ್ಟನೆ ನಡೆದಿದೆ.
ಮಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ವರಿಷ್ಠರು ಎಲ್ಲಾ ಯೋಚನೆ ಮಾಡಿಯೇ ಆಯ್ಕೆ ಮಡ್ತಾರೆ. ಅವರ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.
ನಾವು ಪಕ್ಷದ ನಿಷ್ಠಾವಂತ ಕಾರ್ಯಕ. ವರಿಷ್ಠರು, ಪಕ್ಷ ಏನು ಸೂಚನೆ ಕೊಡುತ್ತೆ ಅದನ್ನು ಮಾಡುತ್ತೇವೆ. ಪಕ್ಷ ಗುಡಿಸು ಎಂದರೆ ಗುಡಿಸುತ್ತೇವೆ, ಒರೆಸು ಎಂದರೆ ಒರೆಸುತ್ತೇವೆ ಎನ್ನುತ್ತಾ ಭಾವುಕರಾದರು.
ಹೊಸಬರು ಬರುತ್ತಿರಬೇಕು, ಬದಲಾವಣೆ ಆಗುತ್ತಿರಬೇಕು. ರಾಷ್ಟ್ರೀಯ ಪಕ್ಷಗಳಲ್ಲಿ ಬದಲಾವಣೆ ಸಹಜ.ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ