ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೆಟ್ರೋ ರೈಲು ಬರುತ್ತಿದ್ದಂತೆಯೇ ಯುವಕ ಫ್ಲಾಟ್ ಫಾರಂ ನಿಂದ ರೈಲು ಹಳಿಗೆ ಜಿಗಿದು, ಎರಡು ಹಳಿಗಳ ಮಧ್ಯೆ ಮಲಗಿದ್ದಾನೆ. ಇದನ್ನ ಕಂಡ ಲೋಕೋ ಪೈಲಟ್ ತಕ್ಷಣ ಮೆಟ್ರೋ ನಿಲ್ಲಿಸಿದ್ದಾರೆ.
ಯುವಕನನ್ನು ಸಿಬಂದಿಗಳು ರಕ್ಷಿಸಿದ್ದು, ಯುವಕ ಬಚಾವ್ ಆಗಿದ್ದಾನೆ. ಘಟನೆಯಿಂದ ಕೆಲ ಕಾಲ ಬಿಎಂ ಆರ್ ಸಿ ಎಲ್ ಮೆಟ್ರೋ ಸಂಚರಾ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿಯುತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ