No WhatsApp. No notification badges. Only essential apps.
As mentioned in #TheArtOfBitfulness (@bitfulness), while my co-author @tanujb chooses to control his digital life using software, I prefer to do it through multiple devices.
📱Here's my home screen, share yours too? pic.twitter.com/yqVKsSuVN5
— Nandan Nilekani (@NandanNilekani) February 15, 2022
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಇನ್ಫೋಸಿಸ್‌ನ ಸಹ ಸಂಸ್ಥಾಪಕ, ಆಧಾರ್ ಕಾರ್ಡ್‌ನ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಿರುವ ನಂದನ್ ನೀಲೇಕಣಿ ಅವರು ತಮ್ಮ ಐ ಫೋನ್‌ನಲ್ಲಿ (ಟ್ವಿಟರ್ ಹೊರತುಪಡಿಸಿ) ಯಾವುದೇ ಸೋಷಿಯಲ್ ಮೀಡಿಯಾ ಆಪ್‌ಗಳನ್ನೇ ಹೊಂದಿಲ್ಲ ಎಂದು ತಮ್ಮ ಫೋನ್‌ನ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್‌ಗೆ ಸಾವಿರಾರು ಫಾಲೋವರ್‌ಗಳು ಪ್ರತಿಕ್ರಿಯೆ ನೀಡಿದ್ದಾರೆ.
ತಂತ್ರಜ್ಞಾನದೊಂದಿಗೆ ಆರೋಗ್ಯಕರ ಸಂಬಂಧ ಎಂಬ ತಲೆಬರಹದಲ್ಲಿ ಟ್ವೀಟ್ ಮಾಡಿರುವ ಅವರು, ನಾನು ಮೊಬೈಲ್‌ನಲ್ಲಿ ಕೇವಲ ಎಸ್ ಎಂ ಎಸ್ ಮತ್ತು ಕರೆ ಮಾತ್ರ ಸ್ವೀಕರಿಸುತ್ತೇನೆ. ಉಳಿದಂತೆ ಊಬರ್, ಮೊದಲಾದ ಉಪಯುಕ್ತ ಆಪ್‌ಗಳನ್ನು ಮಾತ್ರ ಬಳಸುತ್ತೇನೆ. ನೋ ವಾಟ್ಸಾಪ್ ಓನ್ಲಿ ಎಸೆನ್ಶಿಯಲ್ ಆಪ್ ಎಂದು ಅವರು ಹೇಳಿದ್ದಾರೆ.
ಈ ಹಿಂದೆಯೂ ಅವರು ತಮ್ಮ ಪುಸ್ತಕದಲ್ಲಿ ಸಾಮಾಜಿಕ ಜಾಲತಾಣದೊಂದಿಗೆ ವಿಷಕಾರಕ ಸಂಬಂಧ (ಟಾಕ್ಸಿಕ್ ರಿಲೇಶನ್‌ಶಿಪ್ ವಿತ್ ಸೋಷಿಯಲ್ ಮೀಡಿಯಾ ) ಎಂಬ ಮಾತು ಬರೆದಿದ್ದರು. ಆದರೆ ಐಟಿ ಉದ್ಯಮದಲ್ಲಿ ಇಷ್ಟು ಉನ್ನತ ಹುದ್ದೆಯಲ್ಲಿದ್ದ ನಂದನ್ ನೀಲೇಕಣಿ ಯಾವುದೇ ಸೋಷಿಯಲ್ ಮೀಡಿಯಾ ಆಪ್‌ಗಳನ್ನು ಬಳಸದಿರುವುದು ಅನೇಕರಲ್ಲಿ ಅಚ್ಚರಿ ಹುಟ್ಟಿಸಿದೆ.
ಪ್ರತಿ ವರ್ಷ 3 ಲಕ್ಷ ಮಕ್ಕಳಲ್ಲಿ ಕ್ಯಾನ್ಸರ್ – ಡಾ.ಎಂ.ವಿ.ಜಾಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ