Cancer Hospital 2
Bottom Add. 3

*ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಸಾವಿನ ಸರಣಿ; 16 ನವಜಾತ ಶಿಶುಗಳು ಸೇರಿ 31 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ನಂದೇಡ್: ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಹಾಗೂ ರೋಗಿಗಳ ಸಾವಿನ ಸರಣಿ ಮುಂದುವರೆದಿದೆ. 24 ಜನರು ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಆಸ್ಪಯಲ್ಲಿ ಮತ್ತೆ 7 ಜನರು ಮೃತಪಟ್ತಿದ್ದಾರೆ. ಈ ಮೂಲಕನ್ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದ ನಾಂದೇಡ್ ನ ಡಾ.ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ 16 ನವಜಾತ ಶಿಶುಗಳು ಸೇರಿ 31 ಜನರು ಸಾವನ್ನಪ್ಪಿದ್ದಾರೆ.

24 ಗಂಟೆಯಲ್ಲಿ 12 ನವಜತ ಶಿಶುಗಳು ಹಾಗು 12 ರೋಗಿಗಳು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಸರ್ಕಾರ ಮೂವರು ತಜ್ಞರ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಮತ್ತೆ ನಾಲ್ಕು ಮಕ್ಕಳು ಸೇರಿ 7 ಜನರು ಮೃತಪಟ್ಟಿದ್ದಾರೆ. ಈಮೂಲಕ ನಾಂದೇಡ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ 16 ನವಜಾತ ಶಿಶುಗಳು ಸೇರಿ 31 ಜನರು ಸಾವನ್ನಪ್ಪಿದ್ದು, ಆತಂಕಕ್ಕೆ ಕಾರಣವಗಿದೆ.

ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಔಷಧಿ ಕೊರತೆಯಿಂದ ಈ ದುರಂತ ಸಂಭವಿಸಿದೆ ಎಂದು ಆಸ್ಪತ್ರೆ ಹೇಳುತ್ತಿದೆ. ಆದರೆ ಈ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾಣವಾಗಿದ್ದು, ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ.


Bottom Add3
Bottom Ad 2

You cannot copy content of this page