
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಗುರುವಾರ ನಂದಿ ಹಿಲ್ಸ್ ನಲ್ಲಿ ನಡೆಯಬೇಕಿದ್ದ ಸಚಿವಸಂಪುಟ ಸಭೆ ಹಠಾತ್ ರದ್ದಾಗಿದೆ.
ನಂದಿಹಿಲ್ಸ್ ಬದಲು ಬೆಂಗಳೂರಿನಲ್ಲೇ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ.
ಈಗಷ್ಟೆ ರಾಜ್ಯ ಸರಕಾರದಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಸಭೆ ನಡೆಯಲಿದೆ.