ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಬುಧವಾರ ಧರಿಸಿ ಬಂದಿದ್ದ ತಿಳಿ ನೀಲಿ ಬಣ್ಣದ ಜಾಕೇಟ್ ದೇಶದ ಗಮನ ಸೆಳೆದಿದೆ. ಈ ಜಾಕೆಟ್ ಗೂ ರಾಜ್ಯ ರಾಜಧಾನಿ ಬೆಂಗಳೂರಿಗೂ ವಿಶೇಷ ನಂಟಿದೆ.
ಪ್ರಧಾನಿ ಮೋದಿ ಇಂದು ಲೋಕಸಭೆಗೆ ಧರಿಸಿ ಬಂದಿದ್ದ ತಿಳಿ ನೀಲಿ ಬಣ್ಣದ ಸದ್ರಿ ಜಾಕೆಟ್ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಸಮವಸ್ತ್ರವಾಗಿದೆ ಎಂಬುದು ವಿಶೇಷ. ಇತ್ತೀಚೆಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾಗ ಈ ಜಾಕೆಟ್ ನ್ನು ನೀಡಲಾಗಿತ್ತು.
ಇಂಧನ ಸಪ್ತಾಹ-2023ಕ್ಕೆ ಫೆ.6ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಲಾದ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದ ಈ ವಿಶೇಷ ಜಾಕೆಟ್ ನ್ನು ಪ್ರಧಾನಿಯವರಿಗೆ ನೀಡಿತ್ತು. ಇಂದು ಪ್ರಧಾನಿ ಮೋದಿಯವರು ಈ ಜಾಕೆಟ್ ಧರಿಸಿ ಸಂಸತ್ ಕಲಾಪಕ್ಕೆ ಆಗಮಿಸಿದ್ದು ವಿಶೇಷವಾಗಿದೆ.
ಏಕ ಬಳಕೆ ಪ್ಲಾಸ್ಟಿಕ್ ನ್ನು ಕ್ರಮೇಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ಮಾರ್ಗದರ್ಶನ ಪಡೆದುಕೊಂಡ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಮರುಬಳಕೆಯ ಪಾಲಿಯೆಸ್ಟರ್ ಮತ್ತು ಹತ್ತಿಯಿಂದ ಮಾಡಿದ ಚಿಲ್ಲರೆ ಗ್ರಾಹಕ ಅಟೆಂಡೆಂಟ್ ಗಳು ಮತ್ತು ಎಲ್ ಪಿಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರವನ್ನು ಅಳವಡಿಸಿಕೊಂಡಿದೆ. ಇಂಡಿಯನ್ ಆಯಿಲ್ ನ ಗ್ರಾಹಕ ಅಟೆಂಡೆಂಟ್ ನ ಪ್ರತಿ ಸಮವಸ್ತ್ರವು ಸುಮಾರು 28 ಬಳಸಿದ PET ಬಾಟಲಿಗಳ ಮರುಬಳಕೆಯನ್ನು ಬೆಂಬಲಿಸುತ್ತದೆ. ಇಂಡಿಯನ್ ಆಯಿಲ್ ಉದ್ಯೋಗಿಗಳು ಹಾಗೂ ಸಶಸ್ತ್ರ ಪಡೆಗಳಿಗೆ ಸುಸ್ಥಿರ ಉಡುಪುಗಳನ್ನು ತಯಾರಿಸಲು 10 ಕೋಟಿಗೂ ಅಧಿಕ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತಿದೆ.
*ಇಡಿಯಿಂದ ಮತ್ತೆ ಬುಲಾವ್; ಮಗಳಿಗೂ ಸಿಬಿಐ ನೊಟೀಸ್; ಬೇಸರ ತೋಡಿಕೊಂಡ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarpressmeetshivamoggaed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ