*ನಾರಿ ಶಕ್ತಿ ವಂದನಾ ಕಾರ್ಯಗಾರವನ್ನು ಉದ್ಘಾಟಿಸಿದ ಶಶಿಕಲಾ ಜೊಲ್ಲೆ*


ನಾರಿ ಶಕ್ತಿ ರಾಷ್ಟ್ರದ ಶಕ್ತಿ ಶಶಿಕಲಾ ಜೊಲ್ಲೆ ಅಭಿಮತ
ಪ್ರಗತಿವಾಹಿನಿ ಸುದ್ದಿ: ಭಾರತ ಸ್ವಾತಂತ್ರ್ಯವಾಗಿ 77 ವರ್ಷಗಳಾಗಿವೆ. ಅದರಲ್ಲಿ 67 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು ಆದರೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಜವಾದ ಅಭಿವೃದ್ಧಿಯನ್ನು ನೋಡಿದೆವು. ತದ ನಂತರ ಅಭಿವೃದ್ಧಿ ಮುಂದುವರೆಯಲಿಲ್ಲ. ಈಗ ಮತ್ತೆ ಕಳೆದ 9 ವರ್ಷಗಳಿಂದ ದೇಶದಲ್ಲಿ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಸೃಷ್ಟಿಯಾಗಿದೆ ಎಂದು ರಾಷ್ಟ್ರೀಯ ಸಹ ಸಂಚಾಲಕರು ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಬುಧವಾರ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾಭವನದಲ್ಲಿ ಆಯೋಜಿಸಿದ ನಾರಿ ಶಕ್ತಿ ವಂದನಾ ಅಭಿಯಾನ ಹಾಗೂ ಮಹಿಳಾ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿ,ದೇಶದಲ್ಲಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ನಮ್ಮ ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಪುನರ್ ಜನ್ಮವಾಗಿ ನಮ್ಮ ನಡುವೆ ಇದ್ದಾರೆ. ಇಂತಹ ದೈವಿಪುರುಷನನ್ನು ಮತ್ತೆ ದೇಶದ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಪಣ ತೊಡಬೇಕೆಂದರು. ಕಳೆದ 9-10 ವರ್ಷಗಳಿಂದ ಪ್ರಧಾನಿ ನರೇಂದರ ಮೋದಿಯವರ ನೇತೃತ್ಯದಲ್ಲಿ ನಮ್ಮ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ದೇಶ ಬದಲಾವಣೆ ಕಂಡಿದೆ ಎಂದರು.
ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಿಂದ 500 ವರ್ಷಗಳ ಕನಸು ಪ್ರಧಾನಿಗಳ ನೇತೃತ್ವದಲ್ಲಿ ನನಸಾಯಿತು. ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುವ ಯೋಜನೆ, ದೇಶದ ಸುರಕ್ಷತೆ, ರೈತರ ಹಿತ, ಯುವಕರಿಗೆ ಉದ್ಯೋಗಾವಕಾಶ ಯೋಜನೆ, ರೈಲುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು, ಜಲಜೀವನ್ ಮಿಷನ್, ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆಗಳ ಉಚಿತ ನಿರ್ಮಾಣ, ಉಜ್ವಲ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಧಾನಿಗಳು ನೀಡಿದ್ದಾರೆ ಎಂದರು.
ನಾವೆಲ್ಲರೂ ಕೆಲಸ ಕಾರ್ಯಗಳನ್ನು ನಮ್ಮ ಮಕ್ಕಳು, ಕುಟುಂಬಕ್ಕೋಸ್ಕರ ಮಾಡುತ್ತೇವೆ. ಆದರೆ ಪ್ರಧಾನಿಗಳಿಗೆ ಯಾವುದೇ ಕುಟುಂಬ ಇಲ್ಲ.ಅವರು ಹಗಲಿರುಳು ಸೇವೆ ಮಾಡುತ್ತಿರುವುದು ದೇಶದ ಜನರಿಗೋಸ್ಕರ. ಭಾರತ ಮಾತೆಯನ್ನು ವಿಶ್ವದ ಗುರುವಿನ ಸಿಂಹಾನಸದ ಮೇಲೆ ರಾರಾಜಿಸುವಂತೆ ಮಾಡುವ ಕಾಲ ಸಮೀಪಿಸುತ್ತಿದೆ ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ,ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.
ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವಥಪುರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸತೀಶ ಅಪ್ಪಾಜಿಗೋಳ,ಶಾಂಭವಿ ಅಶ್ವಥಪುರ,ಶಕುಂತಲಾ ಡೋನವಾಡೆ,ಜಯಾನಂದ ಜಾಧವ, ಬಿಜೆಪಿ ಮಹಿಳಾ ಮಂಡಳ ಅಧ್ಯಕ್ಷ ಶಕುಂತಲಾ ಡೋಣವಾಡೆ,ಬೀರೇಶ್ವರ ಚೇರಮನ್ ಜಯಾನಂದ ಜಾಧವ, ಸಂಜಯ ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ